ಸತ್ಯಜೀತ್‌ಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ
ಬೈಲಹೊಂಗಲ 13: ಪೋಷಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೂರುವರೆ ದಶಕಗಳಿಂದ ಹೆಸರು ಮಾಡಿದ ಸೈಯದ ನಿಜಾಮುದ್ದಿನ ಅಲಿಯಾಸ ಸತ್ಯಜೀತ್ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸತ್ಯಜೀತ್ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಶಫಿ ಅಂಕಲಗಿ, ಸತ್ಯಜೀತ ಅವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಹಾಗೂ ಖಳನಟನಾಗಿ ತಮ್ಮದೇ ಆದ ಶೈಲಿಯಲ್ಲಿ ನಟನೆ ಮಾಡಿ ಚಿತ್ರ ಪ್ರೇಮಿಗಳನ್ನು ರಂಜಿಸುತ್ತಿದ್ದರು. ಬಸ್ ಚಾಲಕ ವೃತ್ತಿಗೆ ತಿಲಾಂಜಲಿ ಹೇಳಿ ತಮ್ಮ ಬದುಕನ್ನು ಚಿತ್ರರಂಗಕ್ಕೆ ಮುಡಿಪಾಗಿಟ್ಟಿದ್ದರು ಎಂದರು.
ರೋಹಿತ ನವಲಗುಂದ, ವಿಶಾಲ ಮಿಸಿ, ಶಿವಾಜಿ ಮಾನೆ, ಸಮೀರ ಬಾಳೇಕುಂದ್ರಿ, ರಿಯಾಜಹ್ಮದ ಖಾಜಿ, ರಿಯಾಜ ಸವಟಗಿ, ಯಲ್ಲಪ್ಪ ಬಗರಿಕಾರ, ಈರಣ್ಣ ಕುಂಬಾರ, ಆಕಾಶ ದೇವಮಾನೆ ಹಾಗೂ ಅನೇಕರು ಸಭೆಯಲ್ಲಿ ಇದ್ದರು.