ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಿವರಾಜ್ ಕೆಂಗನಾಳ ಚಾಲನೆ
ಇಂಡಿ 08: ತಾಲೂಕಿನ ತಾಂಬಾ ಮಾಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ವಿವಿಧ ವಾರ್ಡಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿಜಯಪೂರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರು ಹಾಗೂ ಸಿಂದಗಿ ಮತಕ್ಷೇತ್ರದ ಸಂಚಾಲಕ ಶಿವರಾಜ್ ಕೆಂಗನಾಳ ಚಾಲನೆ ನೀಡಿದರು.
ಅವರು ತಾಂಬಾ ಮಾಹಾಶಕ್ತಿ ಕೇಂದ್ರದಲ್ಲಿ 16 ಭೂತಗಳು ಬರುತ್ತವೆ. ಪ್ರತಿ ಭೂತಗೆ ಕನಿಷ್ಠ 300 ಜನ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ನಮ್ಮ ಪಕ್ಷದ ಮುಖಂಡರು, ಪದಾಧಿಕಾರಿಗಳು ಸಕ್ರಿಯ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳು, ಸದಸ್ಯತ್ವ ಮಾಡಿಕೊಂಡಿದ್ದು, ಉಳಿದ ಮತದಾರರು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವ ಪಡೆಯವ ಮುಖಾಂತರ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ. ಸದೃಢ ಹಾಗೂ ಸಮರ್ಥ ಆಡಳಿತ ನೀಡುತ್ತಿರುವ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ 8800002024 ನಂಬರ್ ಗೆ ಕರೆ ಮಾಡಿ ಸದಸ್ಯರಾಗಿ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಸಿಂದಗಿ ಮತಕ್ಷೇತ್ರದ ಸಂಚಾಲಕ ಶಿವರಾಜ್ ಕೆಂಗನಾಳ ತಾಂಬಾ ಗ್ರಾಮದ ಭೂತ ಸಂಖ್ಯೆ 88 (ವಾರ್ಡ ನಂಬರ್ 5) ರಲ್ಲಿ ಸದಸ್ಯತ್ವ ಮಾಡುವ ಮುಖಾಂತರ ಮಾತನಾಡಿದರು. ಸಿದ್ದಪ್ಪ ಕಲ್ಲೂರ, ಶಂಕರ ಯಳಕೋಟಿ ,ಅನೀಲ ಬಪಗೊಂಡಿ, ರೇವಣಸಿದ್ದಪ್ಪ ಕನ್ನೂರ, ನಂದರಾಯ ಬೇನೂರ, ಭೀಮಾಶಂಕರ ಪಾತ್ರದ, ಬೀರ್ಪ ಪೂಜಾರಿ, ಜೇಟ್ಟೆಪ್ಪ ಯಳಕೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.