ಶಿವನೂರ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ
ಲೋಕದರ್ಶನ ವರದಿ
ಸಂಬರಗಿ 29: ಕಿರಣಗಿ ಹಾಗೂ ಶಿವನೂರ ಗ್ರಾಮದ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಶಿವನೂರ ಗ್ರಾಮದಲ್ಲಿ ಶಾಸಕ ಶ್ರೀಮಂತ ಪಾಟೀಲ ಅವರ ಸಮ್ಮುಖದಲ್ಲಿ ಬಿಜೆಪಿ ಪ್ರವೇಶದಿಂದ ಈ ಭಾಗದ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಂದೆರೆಗೀಡಾಗಿದ್ದಾರೆ.
ಗಡಿ ಭಾಗದ ಹಲವು ಗ್ರಾಮಗಳಲ್ಲಿ ಕಾರ್ಯಕರ್ತರು ಹಂತ ಹಂತವಾಗಿ ಬಿಜೆಪಿ ಸೇರುತ್ತಿದ್ದಾರೆ. ಈ ಭಾಗದಲ್ಲಿ ಶಾಸಕ ಶ್ರೀಮಂತ ಪಾಟೀಲ ಮಾಡಿರುವ ಅಬಿವೃದ್ಧಿ ಕಾರ್ಯಗಳನ್ನು ನೋಡಿ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷ ಸಂಘಟನೆ ಬಲಿಷ್ಟವಾಗುತ್ತಿರುವದರಿಂದ ಕಾರ್ಯಕರ್ತರು ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿತ್ತು. ನಾನು ಶಾಸಕನಾದನಂತರ ಈ ಭಾಗದಲ್ಲಿ ರಸ್ತೆ ನೀರು ಶಾಲಾ ಕಟ್ಟಡಗಳಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು ಗ್ರಾಮೀಣ ಭಾಗದ ಸಂಪರ್ಕ ರಸ್ತೆ ಡಾಂಬರಿಕರಣ ಮಾಡಿದ್ದೇನೆ. 23 ಕೆರೆತುಂಬುವ ಯೋಜನೆ 230 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಈ ಭಾಗದ ಖಿಳೇಗಾವ ಬಸವೇಶ್ವರ ಏತ ನೀರಾವರಿ
ಯೋಜನೆ ಪೂರ್ಣಗೊಳಿಸಿ ಬರಪೀಡಿತ ಗ್ರಾಮಗಳ ಹರಿತ್ಕ್ರಾಂತಿ ಮಾಡುವ ಕೆಲಸ ನೋಡಿ ಬಿಜೆಪಿ ಸೇರುತ್ತಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರಾದ ಅಡಿವೆಪ್ಪಾ ನಂದಗಾವ, ಶ್ರೀಶೈಲ್ ಮೆಂಡಿಗೇರಿ, ಚಾಂಗದೇವ ಪಾಟೀಲ್ ಸೇರಿದಂತೆ ಹಲವಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.
ದೀಪಕ ಪಾಟೀಲ, ವಿಜಯ ಅಜುರ, ವಿಜಯ ಅಢಳಿ, ಶಂಭು ಮಗದುಮ, ಲವಾ ಮಗದುಮ, ಶ್ರೀಶೈಲ ಪಾಟೀಲ, ಹನಮಂತ ಗುಮತಾಜ, ರವಿ ನಾಗಗೋಳ, ಸುನೀಲ ಚೌಗಲೆ, ಬಿ ಕೆ ಮಗದುಮ್, ಪ್ರಕಾಶ ಕಂಗನೋಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು