ತಾಲ್ಲೂಕು ಅಧ್ಯಕ್ಷರಾಗಿ ಶಿವಕುಮಾರ ನೇಮಕ
ರಾಣೇಬೆನ್ನೂರು 01: ತಾಲೂಕಿನ ನದಿ ಹರಳಹಳ್ಳಿ ಗ್ರಾಮದ ಯುವ ಜಾನಪದ ಕಲಾವಿದ ಶಿವಕುಮಾರ್ ಜಾಧವ್ ಅವರನ್ನು ತಾಲೂಕಾ ಮರಾಠಾ ಕ್ಷತ್ರಿಯ ಘಟಕದ ಅಧ್ಯಕ್ಷನನ್ನಾಗಿ ನೇಮಕಗೊಳಿಸಲಾಗಿದೆ. ಇವರನ್ನು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತು ನೇಮಕಾತಿ ಗೊಳಿಸಿದ್ದು, ಕ್ಷತ್ರಿಯ ಸಮಾಜ ಸಂಘಟನೆ ಮೂಲ ಆಸೆಯನ್ನು ಹೊಂದಿರುವ ಪರಿಷತ್ತು, ಶಿವಕುಮಾರ್ ಜಾಧವ್ ಅವರಿಗೆ ಕಾರ್ಯಪ್ರವರ್ತರಾಗುವಂತೆ ಸೂಚಿಸಿದ್ದಾರೆ.