ಮಹಾಮಂಡಳ ನಿರ್ದೇಶಕರಾಗಿ ವಾರದ ಆಯ್ಕೆ
ಸಿಂದಗಿ04: ಪಟ್ಟಣದ ದಿ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ನಿ. ನಿರ್ದೇಶಕ ಶರಣಪ್ಪ ವಾರದ ಅವರನ್ನು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಬೆಂಗಳೂರ ಇದರ ಶಿಕ್ಷಣ ನಿಧಿ ಸಲಹಾ ಸಮಿತಿಗೆ ಮಹಾಮಂಡಳದ ಅಧ್ಯಕ್ಷ ಎಚ್.ಕೆ.ಪಾಟೀಲರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಆಯ್ಕೆಗೆ ಸಹಕರಿಸಿದ ಮಹಾಮಂಡಳ ಅಧ್ಯಕ್ಷರಿಗೆ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ಅಧ್ಯಕ್ಷ ಸುರೇಶಬಾಬು ಜೋಗುರ, ಉಪಾಧ್ಯಕ್ಷರು ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು, ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.