ಇಂದಿನಿಂದ ಗಚ್ಚಿನ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ
ಲೋಕದರ್ಶನ ವರದಿ
ಅಥಣಿ 16: ಮಹಾ ಶಿವರಾತ್ರಿ ಅಂಗವಾಗಿ ಗಚ್ಚಿನ ಮಠದ ಪೀಠಾಧಿಪತಿ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಫೆ.17 ರಿಂದ 19 ರವರೆಗೆ ಶರಣ ಸಂಸ್ಕೃತಿ ಉತ್ಸವ ಗಚ್ಚಿನ ಮಠದ ಆವರಣದಲ್ಲಿ ನಡೆಯಲಿದೆ.
ಫೆ.17 ಶುಕ್ರವಾರದಂದು ಸಂಜೆ 6 ಗಂಟೆಗೆ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಇಳಕಲ್ನ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ, ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಹಿಸುವರು. ಕಾರ್ಯಕ್ರಮವನ್ನು ಬಿಳ್ಳೂರ ವೀರಕ್ತ ಮಠದ ಮುರುಘೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕುಷ್ಠಗಿ ಶಾಸಕ ಅಮರೇಗೌಡ ಬೈಯ್ಯಾಪುರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಎಸ್.ಆರ್.ಪಾಟೀಲ, ಕಾಂಗ್ರೆಸ್ ಧುರೀಣ ಗಜಾನನ ಮಂಗಸೂಳಿ ಹಾಗೂ ಬೆಂಗಳೂರಿನ ಉದ್ಯಮಿ ಎಮ್.ಎಮ್.ನಾಗರಾಜ ಆಗಮಿಸುವರು.
ಫರ.18 ಶನಿವಾರದಂದು ಮುಂಜಾನೆ 7.30 ಕ್ಕೆ ನಡೆಯಲಿರುವ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಉಪ್ಪಿನ ಬೆಟಗೇರಿ ಗ್ರಾಮದ ವೀರಕ್ತ ಮಠದ ಕುಮಾರ ವೀರೂಪಾಕ್ಷ ಸ್ವಾಮೀಜಿ ಹಾಗೂ ಹಲ್ಯಾಳ ವೀರಕ್ತ ಮಠದ ಗುರುಸಿದ್ಧ ಸ್ವಾಮೀಜಿ, ರೈತ ಮುಖಂಡ ಶಶಿಕಾಂತ ಪಡಸಲಗಿ ಗುರುಗಳು ಸಮ್ಮುಖ ವಹಿಸುವರು. ಶ್ರೀ ಗುರುಮಹಾಂತ ಸ್ವಾಮೀಜಿ ಲಿಂಗಪೂಜಾ ಪ್ರಾತ್ಯಕ್ಷಿಕತೆ ಮಾಡಿ ತೋರಿಸುವರು. ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರ್ಪ ಸವದಿ, ಪುರಸಭಾ ಸದಸ್ಯ ದೀಲೀಪ ಲೋಣಾರೆ, ರಾಷ್ಟ್ರೀಯ ಬಸವ ತತ್ವ ಪರಿಷತ್ನ ಅರುಣಕುಮಾರ, ಮುರುಘೇಂದ್ರ ಬ್ಯಾಂಕ ಅಧ್ಯಕ್ಷ ಸಂಜಯ ತೆಲಸಂಗ, ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಚಿಕ್ಕೋಡಿ ಅರಣ್ಯ ಅಧಿಕಾರಿ ಪ್ರಶಾಂತ ಗೌರಾಣಿ, ಗುತ್ತಿಗೆದಾರ ರಾಜು ಆಲಬಾಳ ಆಗಮಿಸುವರು.
ಇದೇ ದಿನ ಮುಂಜಾನೆ 9 ಗಂಟೆಗೆ ಮುರುಘೇಂದ್ರ ಶಿವಯೋಗಿಗಳ ಭಾವ ಚಿತ್ರ ಹಾಗೂ ವಚನ ಗ್ರಂಥಗಳನ್ನು ಪಲ್ಲಕ್ಕಿಯಲ್ಲಿಟ್ಟು ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುವುದು. ಸಂಜೆ 6 ಗಂಟೆಗೆ ನಡೆಯಲಿರುವ ಚಿಂತನ ಗೋಷ್ಟಿ ಕಾರ್ಯಕ್ರಮದ ಸಾನಿಧ್ಯವನ್ನು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ, ಉದ್ಯಮಿ ಶಿವಲಿಂಗ ಢವಳೇಶ್ವರ, ಕೆ.ಎ.ಎಸ್ ಅಧಿಕಾರಿ ಮಲಗೌಡ ಝರೆ, ವೀರ ಶೈವ ವೇದಿಕೆಯ ಜಯಂತ ಕುಮಾರ ಆಗಮಿಸುವರು. ಭಾರತ್ ಅಂಧರ ಕ್ರಿಕಠಟ್ ಮಂಡಳಿಯ ಅಧ್ಯಕ್ಷ ಡಾ.ಮಹಾಂತೇಶ ಕಿವುಡಣ್ಣವರ, ಕ್ಲಾರೋನೆಟ್ ವಾದಕ ನರಸಿಂಹಲು ವಡವಾಟಿ, ಖ್ಯಾತ ಗಾಯಕಿ ಅಕ್ಕಮ್ಮ ಆಲೂರ, ಧಾರವಾಡದ ಗಾಯಕ ಮೃತ್ಯುಂಜಯ ಶೆಟ್ಟರ ಇವರನ್ನು ಶ್ರೀ ಮಠದಿಂದ ಸತ್ಕರಿಸಲಾಗುವುದು. ಮಹಾಶಿವರಾತ್ರಿ ಅಂಗವಾಗಿ ನಾಡಿನ ಖ್ಯಾತ ಸಂಗೀತಗಾರರಿಂದ ರಾತ್ರಿ ಇಡಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಫೆ.19 ಭಾನುವಾರದಂದು ಸಂಜೆ 6 ಗಂಟೆಗೆ ನಡೆಯಲಿರುವ ಲಿಂ.ಸಿದ್ಧಲಿಂಗ ಅಪ್ಪಗಳ ಸ್ಮರಣೋತ್ಸವ ಹಾಗೂ ಅಥಣೀಶ ರಚಿತ ಮಹಾತ್ಮರ ಚರಿತಾಮೃತ ಗ್ರಂಥಕ್ಕೆ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ, ಸಮ್ಮುಖವನ್ನು ಶೇಗುಣಸಿ ವೀರಕ್ತ ಮಠದ ಮಹಾಂತ ಪ್ರಭು ಸ್ವಾಮೀಜಿ, ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ, ತೆಲಸಂಗ ವೀರಕ್ತ ಮಠದ ವಿರೇಶ ದೇವರು ವಹಿಸುವರು. ಮುಖ್ಯ ಅತಿಥಿಗಳಾಗಿ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಆಗಮಿಸುವರು ಎಂದು ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ತೆಲಸಂಗನ ವೀರೇಶ ದೇವರು, ಬ್ಯಾಡಗಿಯ ಮಲ್ಲಿಕಾರ್ಜುನ ಸ್ವಾಮೀಜಿ, ಚಳ್ಳಕೇರಿಯ ಬಸವ ಕಿರಣ ಸ್ವಾಮೀಜಿ, ಧುರೀಣರಾದ ಶಿವಾನಂದ ದಿವಾನಮಳ, ರಾಜು ಬಿಳ್ಳೂರ, ಹಣಮಂತ ಕಾಲವೆ, ರಾಮನಗೌಡ ಪಾಟೀಲ ಉಪಸ್ಥಿತರಿದ್ದರು.