ಇಂಡಿ

ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ

ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ

ಇಂಡಿ,05:  ತಾಲೂಕಿನ ಸುಕ್ಷೇತ್ರ ಹೋರ್ತಿ ಶ್ರೀ ರೇವಣಸಿದ್ಧೇಶ್ವರ ದೇವಾಸ್ಥಾನದ ಆವರಣದಲ್ಲಿ  ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಮಂಗಲೋತ್ಸವ  ಇದೆ ಸೆ. 02 2024 ರಂದು ಸೋಮವಾರ ಬೆಳಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿತ್ತು. 

ಬೆಳಗ್ಗೆ ರೇವಣಸಿದ್ಧೇಶ್ವರ ಮೂರ್ತಿಗೆ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಭಜನಾ ಮೇಳ, ಕುಂಭ, ಕಳಶದೊಂದಿಗೆ  ರೇವಣಸಿದ್ಧೇಶ್ವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. 

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತಡವಲಗಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ವಹಿಸಿದ್ದರು. ಗೀರಿಜಾನಂದ ಮಾಹಾಸ್ವಾಮಿಗಳು ಕನಕನಾಳ. ಮಾತೋ ಶ್ರೀ ಪಾರ್ವತಿ ಪ.ಚೋಳಚಗುಡ್ಡ ಅಮ್ಮನವರು ಅಮಿನಗಡ. ಶ್ರೀ ಮೈತ್ರಾದೇವಿ ಆಧ್ಯಾತ್ಮ ವಿದ್ಯಾಶ್ರಮ ಗದಗ. ನಿವೃತ್ತ ಉಪನ್ಯಾಸಕ ಎಸ್ ಎಸ್ ಪೂಜಾರಿ. ರೇವಣಸಿದ್ಧೇಶ್ವರ ದೇವಾಸ್ಥಾನದ ಕಮೀಟಿ ಅಧ್ಯಕ್ಷ ಅಣ್ಣಪ್ಪಸಾಹುಕಾರ ಖೈನೂರ, ಅಣ್ಣಪ್ಪಗೌಡ ಪಾಟೀಲ.ಮಲ್ಲಿಕಾರ್ಜುನ ಮೆಡೇದಾರ. ಸಮಾಜ ಕಲ್ಯಾಣ ಇಲಾಖೆ ಸಾಹಯಕ ನಿರ್ದೇಶಕರಾದ ಬಿ ಜೆ ಇಂಡಿ.ರೇವಣಸಿದ್ದಪ್ಪ ಪೂಜಾರಿ,ಅಶೋಕ ಪೂಜಾರಿ.ಶಂಕರೆಪ್ಪ ಡೊಳ್ಳಿ. ಅವ್ವಣ್ಣಗೌಡ ಬಿರಾದಾರ. ಶ್ರೀಮಂತ ಕೋಳಿ, ಗುಲಾಬಸಾಬ ಖುರೇಶಿ, ಗೋಪಾಲ ದೇಶಪಾಂಡೆ,ಮಾದೇವ ಕುಂಬಾರ ಹಾಗೂ  ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಕ್ತಾಧಿಗಳಿಗೆ ಅನ್ನ ಸಂತರೆ​‍್ಣ ನಡೆಸಲಾಯಿತು. 


ಸುದ್ದಿ ಓದಿ