13 ರಿಂದ 15 ರವರೆಗೆ ಶಾಂತೇಶ್ವರ ಜಾತ್ರಾ ಮಹೋತ್ಸವ
ಇಂಡಿ: ಡಿ.13 ರಿಂದ 15 ರವರೆಗೆ ಇಂಡಿ ಪಟ್ಟಣದ ಶಾಂತೇಶ್ವರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಂತೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ತಿಳಿಸಿದರು.
ಪಟ್ಟಣದ ಶ್ರೀ ಶಾಂತೇಶ್ವರ ಸೌಹಾರ್ದ ಸಹಕಾರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ. 13 ಸೋಮವಾರರಂದು ಶಾಂತೇಶ್ವರ ಸೌಹಾರ್ಧ ಮತ್ತು ಶಾಂತೇಸ್ವರ ಟ್ರಸ್ಟ ಕಮಿಟಿ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ.
ಸಾಮೂಹಿಕ ವಿವಾಹದ ಪಾವನ ಸಾನಿಧ್ಯವನ್ನು ಶ್ರೀಶೈಲ ಪೀಟದ ಜಗದ್ಗುರು ಡಾ. ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಸಾನಿಧ್ಯವನ್ನು ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಹೊಟಗಿಯ ಮಲ್ಲಿಕಾರ್ಜುನ ಶಿವಾಚಾರ್ಯರು, ಮಂದ್ರೂಪದ ರೇಣುಕ ಶಿವಾಚಾರ್ಯರು, ಶಿರಶ್ಯಡದ ಅಭಿನವ ಮುರುಘೆಂದ್ರ ಶಿವಾಚಾರ್ಯರು, ಗೋಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಇಂಡಿ ಓಂಕಾರಾಶ್ರಮದ ಡಾ. ಸ್ವರೂಪಾನಂದ ಶ್ರೀಗಳು, ಸೇರಿದಂತೆ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.
14 ರಂದು ಮುಖ್ಯಜಾತ್ರೆ ಇದ್ದು 15 ರಂದು ದೇವರ ಮೆರವಣೆಗೆ ನಡೆಯುತ್ತದೆ. ಕೋವಿಡ್ ನಿಯಮ ಪಾಲಿಸಿ ಜಾತ್ರೆಯಲ್ಲಿ ಸದ್ಬಕ್ತರು ಪಾಲ್ಗೊಳ್ಳಲು ವಿನಂತಿಸಿದರು.
ಈ ಎಲ್ಲ ಕಾರ್ಯಕ್ರಮಗಳು ಶಾಂತೇಶ್ವರ ಟ್ರಸ್ಟ ಕಮೀಟಿ, ಶಾಂತೇಶ್ವರ ಸೌಹಾರ್ದ ಸಹಕಾರಿ ಹಾಗೂ ಬಸವ ಸಮೀತಿಯವರ ನೇತೃತ್ವದಲ್ಲಿ ನಡೆಯಲಿವೆ ಎಂದು ಕಾಸುಗೌಡ ಬಿರಾದಾರ ತಿಳಿಸಿದರು.