ಅತಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ: ಶಹಾಜಿ ನಾಗಣೆ
ಇಂಡಿ, 02: ಓದುಗರ ಚಾವಡಿ ವಿಜಯಪುರ ಸಿಂಚನ ಪುಸ್ತಕದ ಲೋಕಾರೆ್ಣ ಇವರ ಸಹಯೋಗದಲ್ಲಿ ವಿಜಯಪುರ ಎರಡನೇ ವರ್ಷದ ಜಿಲ್ಲಾ ಉತ್ತಮ ಶಿಕ್ಷಕ ಹಾಗೂ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಂಡಿ ತಾಲ್ಲೂಕಿನ ಝಳಕಿ ಸರ್ಕಾರಿ ಪ್ರೌಢಶಾಲೆ ಉತ್ತಮ ಶಿಕ್ಷಕರಾಗಿ ಮುಖ್ಯ ಶಿಕ್ಷಕ ಶಹಾಜಿ ನಾಗಣೆ ಹಾಗೂ ಇಂಡಿ ತಾಲ್ಲೂಕಿನ ಸಿದ್ದೇಶ್ವರ ಪ್ರಾಥಮಿಕ ಶಾಲೆ ಭತಗುಣಕಿ ಶಿಕ್ಷಕ ರಣಜಿ ಬಾಬರ್ ಇವರುಗಳನ್ನು ಉತ್ತಮ ಶಿಕ್ಷಕರಾಗಿ ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ ಸನ್ಮಾನಿಸಲಾಯಿತು.
ಆಯ್ಕೆಯಾಗಿದ್ದ ಶಿಕ್ಷಕರಿಗೆ ಎಸ್ ಡಿ ಎಮ್ ಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ