ಧಾರವಾಡ - ಹುಬ್ಬಳ್ಳಿ

ಡಾ. ಬಿ. ವ್ಹಿ. ಶಿರೂರು ಅವರಿಗೆ ಸೇಡಿಯಾಪು ಕೃಷ್ಣಭಟ್ಟರ ಪ್ರಶಸ್ತಿ ಪ್ರಧಾನ

ಡಾ. ಬಿ. ವ್ಹಿ. ಶಿರೂರು ಅವರಿಗೆ ಸೇಡಿಯಾಪು ಕೃಷ್ಣಭಟ್ಟರ ಪ್ರಶಸ್ತಿ ಪ್ರಧಾನ

ಹುಬ್ಬಳ್ಳಿ 25 : ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ. ವ್ಹಿ. ಶಿರೂರು ಅವರಿಗೆ ಉಡುಪಿಯ ರಾಷ್ಟ್ರ ಕವಿ ಎಂ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಹೈಯರ್ ಎಜುಕೇಷನ್ ಟ್ರಸ್ಟ್‌ ವತಿಯಿಂದ ನೀಡಲಾಗುವ ಸೇಡಿಯಾಪು ಕೃಷ್ಣಭಟ್ಟರ ಪ್ರಶಸ್ತಿ ಪ್ರಧಾನ ಮಾಡಲಾಯಿತು,  ಗೋವಿಂದ ಪೈ ಸಂಶೋಧನ ಕೇಂದ್ರದ ಕಾರ್ಯದರ್ಶಿ ಪ್ರೊ ಜಗದೀಶ್ ಶೆಟ್ಟಿ ಮತ್ತು ಪಾದೇಕಲ್ ವಿಷ್ಣು ಭಟ್, ವೆಂಕಟೇಶ್, ವಿನಾಯಕ, ಉಡುಪಿಯಿಂದ ಆಗಮಿಸಿ, ಹಿರಿಯ ವಿದ್ವಾಂಸರಾದ ಡಾ ಬಿ ವ್ಹಿ ಶಿರೂರು ಅವರಿಗೆ  ಸೇಡಿಯಾಪು ಕೃಷ್ಣಭಟ್ಟರ ಪ್ರಶಸ್ತಿ ಪ್ರಧಾನ ಮಾಡಿದರು. 

ನಾಡಿನ ಸಾಕ್ಷಿ ಪ್ರಜ್ಞೆ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಬಿ. ವ್ಹಿ. ಶಿರೂರು ಅವರಿಗೆ 2024 ನೇ ಸಾಲಿನ ಪ್ರಶಸ್ತಿ  ನೀಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆಯ ಸಂಗತಿ ಶಾಸನ, ಗ್ರಂಥ ಸಂಪಾದನೆ, ಜೈನ ಸಾಹಿತ್ಯ,ವೀರ ಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸಮಾಡಿ  ಹೆಸರಾಗಿದ್ದಾರೆ. ಇಂಥ ಸಂಶೋಧಕರು ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಅಭಿನಂದಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ ಬಿ. ವ್ಹಿ. ಶಿರೂರು ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತ ಗೊಳಿಸಿ ಕನ್ನಡ ಭಾಷಾ ಗಟ್ಟಿತನವನ್ನು ಹಾಳು ಮಾಡುತ್ತಿರುವುದು ವಿಷಾದನೀಯ ವರ್ತಮಾನದಲ್ಲಿ ಯುವಕರಿಗೆ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣಭಟ್ಟರ ಶಾಸ್ತ್ರೀಯ ಪಾಂಡಿತ್ಯವನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದರು.  

ಕಾಡಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯರಾದ ಪ್ರೊ ಉಮಾ ನೆರ್ಲೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಡಾ ವೀರಣ್ಣ ರಾಜೂರ ಮಾತನಾಡಿ ಡಾ ಬಿ ವ್ಹಿ ಶಿರೂರ ಅವರು ದೊಡ್ಡ ವಿದ್ವಾಂಸರಾಗಿದ್ದರೂ ಎಲ್ಲಿಯೂ ತಮ್ಮನ್ನು ಗುರುತಿಸಿಕೊಂಡವರಲ್ಲ. ದಕ್ಷಿಣ ಕನ್ನಡದವರು ಇಂಥ  ಮಹಾನ್ ಸಂಶೋಧಕರನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮನ್ನು ನಾವು ಗೌರವಿಸಿ ಕೊಂಡಂತೆ ಎಂದರು. 

ಕಾರ್ಯಕ್ರಮದಲ್ಲಿ  ಡಾ. ಸಣ್ಣವೀರಣ್ಣ ದೊಡ್ಡಮನಿ, ಡಾ ಹನುಮಾಕ್ಷಿ ಗೋಗಿ, ಡಾ. ಧನವಂತ ಹಾಜವಗೋಳ.  ಡಾ. ಸುರೇಶ್ ಡಿ. ಹೊರಕೇರಿ, ಎಸ್ ಎಂ ಪಾಟೀಲ್, ಮಂಜುನಾಥ , ಡಾ. ಜಯಶ್ರೀ ಹಿರೇಮಠ, ಡಾ. ಪ್ರಭಾತಿ, ಕೃತಿಕಾ ಶಿರೂರು. ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ