ಬೈಲಹೊಂಗಲ

‘ಆತ್ಮ ಧ್ಯಾನದ ಬುತ್ತಿ’ ಗಜಸಿಲ್ ಸಂಕಲನಕ್ಕೆ ದ್ವಿತೀಯ ಬಹುಮಾನ

‘ಆತ್ಮ ಧ್ಯಾನದ ಬುತ್ತಿ’ ಗಜಸಿಲ್ ಸಂಕಲನಕ್ಕೆ ದ್ವಿತೀಯ ಬಹುಮಾನ

ಲೋಕದರ್ಶನ ವರದಿ 


ಬೈಲಹೊಂಗಲ 11: ತಾಲೂಕಿನ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ ನಾಗೇಶ್ ಜೆ. ನಾಯಕ ರಚಿಸಿದ ಆತ್ಮ ಧ್ಯಾನದ ಬುತ್ತಿ ಗಜಸಿಲ್ ಸಂಕಲನಕ್ಕೆ ಬಾಗಲಕೋಟೆಯ ಗ್ರಾಮೀಣ ಸಾಹಿತ್ಯ ವೇದಿಕೆ ಕೊಡಮಾಡುವ 2021-22 ರ ಸಾಲಿನ ದ್ವಿತೀಯ ಪುಸ್ತಕ ಬಹುಮಾನ ಲಭಿಸಿದೆ. 

ಬಾಗಲಕೋಟೆಯ ಗ್ರಾಮೀಣ ಸಾಹಿತ್ಯ ವೇದಿಕೆಯು 2021-22 ನೇ ಸಾಲಿನ ಶ್ರೀ ಬಿ. ಎಚ್‌. ಬಾಲರೆಡ್ಡಿ ಅವರ ಸ್ಮರಣಾರ್ಥ ಲೇಖಕರಿಗೆ ಪುಸ್ತಕ ಪ್ರಶಸ್ತಿ ಕೊಡುತ್ತಿದ್ದು, ಈ ಸಲದ ಉತ್ತಮ ಕೃತಿಗೆ ನಾಗೇಶ್ ಜೆ. ನಾಯಕ ಅವರು ರಚಿಸಿದ ‘ಆತ್ಮ ಧ್ಯಾನದ ಬುತ್ತಿ’ ಗಜಸಿಲ್ ಸಂಕಲನಕ್ಕೆ ದ್ವಿತೀಯ ಬಹುಮಾನ ಲಭಿಸಿದೆ. ಈಗಾಗಲೇ ನಾಗೇಶ್ ಅವರ 20 ಕೃತಿಗಳು ಪ್ರಕಟವಾಗಿದ್ದು, ಇಂಚಲ ಕಾವ್ಯ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಆಜೂರು ಪುಸ್ತಕ ಪ್ರಶಸ್ತಿ, ಅಡ್ವೈಸರ್ ಸಾಹಿತ್ಯ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಗಂಗಾಧರ ಮಡಿವಾಳೇಶ್ವರ ಪ್ರಶಸ್ತಿ, ಲಭಿಸಿವೆ. ಈ ಪುಸ್ತಕ ಬಹುಮಾನವು 2500 ರೂ. ನಗದು ಒಳಗೊಂಡಿದೆ ಎಂದು ಗ್ರಾಮೀಣ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ತಿರುಪತಿ ಭಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ