ಸ್ಕೌಟ್ಸ್ ಗೈಡ್ಸ್ ನೈತಿಕ ಮೌಲ್ಯ ಬೆಳೆಸುವಲ್ಲಿ ಸಹಕಾರಿ
ಬೈಲಹೊಂಗಲ: 'ವಿಶ್ವಗುರು ಬಸವಣ್ಣನವರ ಸಮಾನತೆಯ ತತ್ವ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಅಡಗಿದೆ' ಎಂದು ಸ್ಕೌಟ್ಸ್, ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂದ್ಯಾ ಹೇಳಿದರು.ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಸ್ಕೌಟ್ಸ್ ಮತ್ತು ಗೈಡ್ಸ್ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.'ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ತತ್ವಗಳ ಆಧಾರದ ಮೇಲೆ ಸ್ಕೌಟ್ಸ್, ಗೈಡ್ಸ್ ಕಾರ್ಯನಿರ್ವಹಿಸುತ್ತಿದೆ. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ರಾಷ್ಟ್ರಪ್ರೇಮ, ನೈತಿಕ ಮೌಲ್ಯ ಬೆಳೆಸುವಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಂಸ್ಥೆಯ ಶಾಲೆ 650ಕ್ಕೂ ಹೆಚ್ಚು ಮಕ್ಕಳನ್ನು ಸ್ಕೌಟಿಂಗ್, ಗೈಡಿಂಗ್ ನಲ್ಲಿ ತೂಡಗಿಸಿ ಮಕ್ಕಳನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲು ದಿಟ್ಟ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ' ಎಂದರು.ಮುಖ್ಯ ಅತಿಥಿ, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, 'ಪ್ರತಿಯೊಂದು ಮನೆಯಲ್ಲಿ ಒಬ್ಬ ಸ್ಕೌಟ್ ಇರಬೇಕು. ಆ ಮಾತನ್ನು ಕಿತ್ತೂರು ರಾಣಿ ಚನ್ಮಮ್ಮ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳ ಸಾಕಾರಗೊಳಿಸಿದ್ದಾರೆ' ಎಂದರು.ಅತಿಥಿ, ಅಪರ ಆಯುಕ್ತರ ಕಾರ್ಯಾಲಯ ಧಾರವಾಡ ಜಂಟಿ ನಿರ್ದೇಶಕ ಗಜಾನನ ಮನ್ನಕೇರಿ ಮಾತನಾಡಿ, 'ಇಡೀ ಶಾಲೆ ಸ್ಕೌಟ್ ಶಾಲೆಯಾಗಿ ಪರಿವರ್ತನೆ ಹೊಂದಿದ್ದು ಮಾದರಿಯಾಗಿದೆ' ಎಂದರು.ಸಂಸ್ಥೆ ಚೇರಮನ್, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಬಿಇಒ ಎ.ಎನ್. ಪ್ಯಾಟಿ, ಸಿ.ವೈ.ತುಬಾಕಿ, ತಾಲ್ಲೂಕಿನ ಸ್ಕೌಟ್ಸ್, ಗೈಡ್ಸ್ ದಳನಾಯಕರು ಶಿಕ್ಷಕರು, ಮಕ್ಕಳ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇದ್ದರು. ಪ್ರಾಚಾರ್ಯ ಎಂ.ಸಿ. ಬಿರಾದಾರ ಸ್ವಾಗತಿಸಿದರು. ಸ್ಕೌಟ್ಸ್, ಗೈಡ್ಸ್ ಕಾರ್ಯದರ್ಶಿ ಎ.ಬಿ.ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಯುಕ್ತಿ ದೇಶನೂರ, ಮಾನಸಾ ಮೂಗಬಸವ ನಿರೂಪಿಸಿದರು