ಸ್ಕೂಲ್ ಡೇಸ್ ಚಲನಚಿತ್ರ ಶತ ದಿನೋತ್ಸವ ಆಚರಿಸಲಿ: ನೀಲಕಂಠಶ್ರೀ
ಬೈಲಹೊಂಗಲ 28: ಉತ್ತರ ಕರ್ನಾಟಕ ಉದಯೋನ್ಮುಖ ಯುವ ಕಲಾವಿದರು ಅಭಿನಯಿಸಿರುವ ಸ್ಕೂಲ್ ಡೇಸ್ ಕನ್ನಡ ಚಲನಚಿತ್ರ ರಾಜ್ಯದಲ್ಲಿ ಉತ್ತಮ ಪ್ರದರ್ಶನ ಹೊಂದಿ ಶತ ದಿನೋತ್ಸವ ಆಚರಿಸಲಿ ಎಂದು ಮುರಗೋಡದ ಮಹಾಂತ ದುರದುಂಡೇಶ್ವರಮಠದ ನೀಲಕಂಠ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಮುರಗೋಡದ ಮಹಾಂತ ದುರದುಂಡೀಶ್ವರ ಮಠದ ಸಭಾಂಗಣದಲ್ಲಿ ಜರುಗಿದ ಶ್ರೀ ಗುರು ಮಹಾಂತ ಕ್ರಿಯೇಷನ್ಸ್ ಬ್ಯಾನರದಲ್ಲಿ ನಿರ್ಮಾಣವಾಗುತ್ತಿರುವ ಸ್ಕೂಲ್ ಡೇಸ್ ಚಲನಚಿತ್ರ ಹಿರೇಬಾಗೇವಾಡಿ ಮತ್ತು ಬೆಳಗಾವಿ ಸುತ್ತಮುತ್ತ ಪ್ರದೇಶಗಳಲ್ಲಿ ಈ ಚಲನಚಿತ್ರವು ಯಶಸ್ವಿಯಾಗಿ ಚಿತ್ರೀಕರಣಗೊಂಡು ಮುರುಗೋಡದಲ್ಲಿ ಮುಕ್ತಾಯ ಹಂತದ ಚಿತ್ರೀಕರಣ ಗೊಳಿಸಲಾಯಿತು. ಚಿತ್ರೀಕರಣದ ಮುಕ್ತಾಯ ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಚಲನಚಿತ್ರ ನಿರ್ಮಾಣ ಮಾಡುವದು ಬಹಳ ಕಷ್ಟ ಇಂತಹ ಸಂದರ್ಭದಲ್ಲಿ ಉದ್ಯಮಿ ಉಮೇಶ ಹಿರೇಮಠ ಅವರು ಕನ್ನಡ ಚಿತ್ರ ನಿರ್ಮಾಣ ಮಾಡುತ್ತಿರುವದು ಸಂತಸದ ಸಂಗತಿ ಎಂದರು.
ಉಪನ್ಯಾಸಕ ಬಸವರಾಜ ಪುರಾಣಿಕ ಮಠ, ನಿರ್ಮಾಪಕ ಉಮೇಶ ಹಿರೇಮಠ, ನಿರ್ದೇಶಕ ಸಂಜಯ್ ಸಹ ನಿರ್ದೇಶಕ ರಂಜಿತ್ ತಿಗಡಿ. ನಾಯಕ-ನಾಯಕಿ ಅನಿಲ ಮತ್ತು ಪ್ರಿಯಾ ಹಾಗೂ ಧರ್ಮದರ್ಶಿ ಅಶೋಕ ಶೆಟ್ಟರ, ವೀರಭದ್ರ್ಪ ದೇಸಾಯಿ, ವಿದ್ಯಾ ವರ್ದಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ, ಜಿ, ವಾಲಿ ಇಟಗಿ, ಪ್ರಾಚಾರ್ಯ ಆನಂದ ಕಳಸದ, ನಿವೃತ್ತ ಪ್ರಾಚಾರ್ಯ ವಿ. ಎಸ್. ಮಾರೀಹಾಳ, ಎಂ. ಆರ್. ಪಾಟೀಲ, ನಿರಂಜನ ಸ್ವಾಮಿಗಳು ಮುಂತಾದವರು ಉಪಸ್ಥಿತರಿದ್ದರು.