ಬಳ್ಳಾರಿ

ರವಿ ಶಂಕರ್ ಗೂರೂಜಿಯವರ ಆಶಿರ್ವಾದ ಪಡೆದ ಸಂಜಯಕುಮಾರ್ ಬಿರಾದಾರ

ರವಿ ಶಂಕರ್ ಗೂರೂಜಿಯವರ ಆಶಿರ್ವಾದ ಪಡೆದ ಸಂಜಯಕುಮಾರ್ ಬಿರಾದಾರ

ಬಿದರ 29: ಅಧ್ಯಾತ್ಮಿಕತೆಯ ದಿವ್ಯ ಸ್ವರೂಪಿ, ಧ್ಯಾನದ ಮೂಲಕ ನೆಮ್ಮದಿಯ ದಾರಿ ತೋರುವ ಗುರು, ಆರ್ಟ್‌ ಆಫ್ ಲಿವಿಂಗ್ ಸಂಸ್ಥಾಪಕ  ರವಿ ಶಂಕರ್ ಗೂರೂಜಿ ಅವರನ್ನು ಸಮಾಜ ಸೇವಕ ಮೈ ಭಾರತ ಎನ್‌.ಎಸ್‌.ಎಸ್‌. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಜಯಕುಮಾರ್ ಬಿರಾದಾರ ಅವರು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಆತ್ಮೀಯವಾಗಿ ಶ್ರೀಗಳನ್ನು ಸನ್ಮಾನಿಸಿದರು. ಪ್ರತಿಯಾಗಿ ಶ್ರೀಗಳು ಸಹ ಸಂಜಯಕುಮಾರ್ ಅವರನ್ನು ಆಶೀರ್ವದಿಸಿ ಯಶಸ್ಸು ಕಾಣುವಂತೆ  ಹಾರೈಸಿದರು. ಸಮಾಜವೇ ಸರ್ವಸ್ವ, ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡು ಮುನ್ನಡೆ ಎಂದು ನನಗೆ ಕಿವಿಮಾತು ಹೇಳಿದರು.ಅವರು ಸ್ಥಾಪಿಸಿರುವ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕನ್ನಡ ನಾಡು ನುಡಿಯ ಅಭಿಮಾನ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರು ಮುಂದಾಗಬೇಕು ಎಂದು ಕರೆ ನೀಡಿದರು. 

ಈ ಅಪೂರ್ವ ಕಾರ್ಯಕ್ರಮದ ನಂತರ ಶ್ರೀಗಳನ್ನು ಭೇಟಿ ಮಾಡಿರುವುದು ನನ್ನ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಸಂಜಯಕುಮಾರ್ ಅನಿಸಿಕೆ ಹಂಚಿಕೊಂಡರು.ಎಸ್‌.ಎಸ್‌.ಆರಿ​‍್ವ. ಟ್ರಸ್ಟ ನಿರ್ದೇಶಕ ಕಮಾಂಡರ್ ಎಚ್‌.ಜಿ. ಹರ್ಷ ಅಧ್ಯಕ್ಷತೆ ವಹಿಸಿದ್ದರು.  ಕಾಲೇಜ್ ಆಪ್ ಆಯುರ್ವೇದ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ್ರರಾದ ಡಾ.ಕೆ. ಸಜೀತಾ,  ಕಾಲೇಜ್ ಆಪ್ ಆಯುರ್ವೇದ ವಿಜ್ಞಾನ ಕೇಂದ್ರದ ಡಾ.ರೀನಾ ರವಿ,  ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಡಾ.ಕೆ.ಸಿ. ಕಿಶೋರ್,  ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ಡಾ.ವಂದನಾ ನಾರಂಗ ಉಪಸ್ಥಿತರಿದ್ದರು. 


ಸುದ್ದಿ ಓದಿ