ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ
ಬೈಲಹೊಂಗಲ 20: ತಾಲೂಕಿನ ಬೆಳವಡಿ ಗ್ರಾಮದ ಎಂ ಅರ್ ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಬೆಳವಡಿ, ಬೂದಿಹಾಳ, ಮೂಗಬಸವ ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಸ್ಫೂರ್ತಿಯ ಚಿಲುಮೆ- ಯಶಸ್ಸಿನತ್ತ ಪಯಣ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಮಂಗಳವಾರ ಜರುಗಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎ ಎನ್ ಪ್ಯಾಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಿರ್ಣಾಯಕ ಘಟ್ಟವಾಗಿದೆ. ಹಾಗಾಗಿ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ಪರೀಕ್ಷಾ ಭಯವನ್ನು ಬಿಟ್ಟು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಬೇಕು ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಬಿ ಎನ್ ಕಸಾಳೆ, ಮುಖ್ಯ ಶಿಕ್ಷಕ ಎಸ್ ಸಿ ಗುಗ್ಗರಿ ಮಾತನಾಡಿದರು.
ಮುಖ್ಯ ಶಿಕ್ಷಕ ಎನ್ ಅರ್ ಠಕ್ಕಾಯಿ ಪರಿಕ್ಷಾ ನಿಯಮಗಳ ಅಧ್ಯಯನ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಮಾಸ್ತಿಹೋಳಿ, ಗಜಾನಂದ ಸೂರ್ಯವಂಶಿ, ಮಲ್ಲಿಕಾರ್ಜುನ ಚಾ ವಲಗಿ ಅವರು ಗಣಿತ ಇಂಗ್ಲಿಷ್, ವಿಜ್ಞಾನ ವಿಷಯಗಳ ಪರೀಕ್ಷೆ ನೀಲನಕ್ಷೆ, ಮಹತ್ವದ ಪಾಠಗಳು, ಅಂಕ ಗಳಿಸುವ ಕುರಿತು ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸಂಪನ್ಮೂಲ ವ್ಯಕ್ತಿ ಎಸ್ ಎಸ್ ಚಳಕೊಪ್ಪ, ಮಹೇಶ ಯರಗಟ್ಟಿ, ಎಸ್ ವಿ ಬಳಿಗಾರ, ಅರಿಫಾ ನದಾಫ, ಕವಿತಾ ಶಿಂದೆ, ಬಿ ಅರ್ ಕಲ್ಯಾಣಶೆಟ್ಟಿ, ಎಂ ಡಿ ಬಾವಾಖಾನ,ಎಸ್ ಐ ಹುಣಸಿಮರದ, ಶಶಿಧರ ಮಿರ್ಜಿ, ಸವಿತಾ ಪಾಟೀಲ, ಎಂ ಬಿ ಪಾಟೀಲ, ಅನೂಪಕುಮಾರ ಹತ್ರೋಟೆ, ಎಚ್ ಎಸ್ ಮಡಿವಾಳರ, ಮೀನಾಕ್ಷಿ ಪಾಟೀಲ ಹಾಗೂ ವಿದ್ಯಾರ್ಥಿಗಳಿದ್ದರು.