ಶ್ರೀಮಂತ ಪಾಟೀಲ ಜನ್ಮ ದಿನದಿಂಂದು ವಿಠ್ಠಲ ರುಕ್ಮಿಣಿ ದೇವಸ್ಥಾನದ ಉದ್ಘಾಟನೆ
ಸಂಬರಗಿ 06: ಶಾಸಕ ಶ್ರೀಮಂತ ಪಾಟೀಲ ಅವರ ಪ್ರಯತ್ನದಿಂದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಕಾಮಗಾರಿ ಮಕ್ತಾಯ ಹಂತದಲ್ಲಿದ್ದು ಜನವರಿ 31ರಂದು ಶ್ರೀಮಂತ ಅವರ ಜನ್ಮ ದಿನದಿಂದ ಉದ್ಘಾಟನೆಗೊಳ್ಳಲಿದೆ ಎಂದು ವಿಠ್ಠಲ ರುಕ್ಮಿಣಿ ದೇವಸ್ಥಾನದ ಭಕ್ತ ಅಶೋಕ ಪಾಟೀಲ ತಿಳಿಸಿದರು.
ಶಿನಾಳ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಗ್ರಾಮದ ವಿಠ್ಠಲ ರುಕ್ಮಿಣಿ ದೇವಸ್ಥಾನ ನಿರ್ಮಾಣಕ್ಕೆ ಸ್ವತಃ ಶಾಸಕ ಶ್ರೀಮಂತ ಪಾಟೀಲ ಒಂದು ಕೋಟಿ ರೂ. ಗ್ರಾಮ ಮಂದಿರ ಕಟ್ಟಡಕೆ ನೀಡಿದ್ದಾರೆ. ಗ್ರಾಮದ ಅಬಿವೃದ್ಧಿ ಕಾರ್ಯಗಳಿಗೆ ಇದು ಅವರು ಮುಖ್ಯವಾಗಿ ಗ್ರಾಮಾಭಿವೃದ್ಧಿ ಉದ್ದೇಶ ಇದೆ.
ಕಾಗವಾಡ ಕ್ಷೇತ್ರದ ಬಿಜೆಪಿ ಯವಾ ನೇತಾರರಾದ ಶ್ರೀನಿವಾಸ ಭಯ್ಯಾ ಪಾಟೀಲ ಸ್ವತ: ಗ್ರಾಮದ ದೇವಸ್ಥಾನಕೆ ಗುರುವಾರ ಭೇಟಿ ನೀಡಿ ಮಾತನಾಡಿ ಅವರು ಶಾಸಕ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ 50 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ಅವರು ಅಭೀವೃದ್ಧಿ ಮಾಡಿ ಕ್ಷೇತ್ರ ಮಾದರಿ ಮಾಡಿದ್ದಾರೆ. ಗ್ರಾಮದಲ್ಲಿ ವಿಠ್ಠಲ ರುಕ್ಮಿಣಿ ದೇವಸ್ಥಾನವನ್ನು ನಿರ್ಮಿಸುವ ಮೂಲಕ ಗ್ರಾಮದ ಭಕ್ತರಿಗೆ ಅನಕೂಲ ಮಾಡಿದ್ದಾರೆ.
ತಂಗಡಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಪಾಂಡು ಪಾಟೀಲ ಹಾಗೂ ಕೃಷ್ಣಾ ಮಾನೇ ಅವರು ಅಂಗಡಿ ಉದ್ಘಾಟಿಸಿದರು. ನ್ಯಾಯವಾದಿ ಚೇತನ ಪಾಟೀಲ, ಪ್ರಲ್ಹಾದ ಪಾಟೀಲ, ರಾಮಾ ಕವಟೇಕರ, ರಾಜು ಕವಠೇಕರ, ಹಿಮಂತ ಪಾಟೀಲ, ಉತ್ತಮ ಆರ್.ಪಾಟೀಲ, ಇಂದ್ರಜಿತ ಪಾಟೀಲ, ರಾಮಾ ಚೌಗಲೇ, ಬಜರಂಗ ಪಾಟೀಲ, ದಾನೋಬಾ ಪಾಟೀಲ, ನಾನಾ ಪಾಟೀಲ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು