ರುದ್ರಗೌಡ ಪಾಟೀಲ 50ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರ್ಪಡೆ
ಅಥಣಿ 02: ಕಾಗವಾಡ ಮತಕ್ಷೇತ್ರದ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡ ಅನಂತಪುರ ಗ್ರಾಮದ ರುದ್ರಗೌಡ ಪಾಟೀಲ ಹಾಗೂ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ನೇತೃತ್ವದಲ್ಲ್ಲಿ ಬಿಜೆಪಿ ಸೇರೆ್ಡಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್ ಹಾರಕಿಹೊಳಿ, ಕಳೆದ 20 ವರ್ಷಗಳಿಂದ ಅಥಣಿ ಶಾಸಕರ ಹಿಡಿತದಲ್ಲಿಯೇ ಕಾಗವಾಡ ಕ್ಷೇತ್ರ ಇತ್ತು. ಕೆಲ ಎಜೆಂಟರ್ ಮೂಲಕ ಈ ಕ್ಷೇತ್ರವನ್ನು ನಿಯಂತ್ರಿಸುತ್ತಿದ್ದರು ಇದನ್ನು ಗಮನಿಸಿದ ನಾನು ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡ ಮಾಡಿಕೊಂಡ ನಂತರ ಕಾಗವಾಡ ಕ್ಷೇತ್ರ ಸ್ವತಂತ್ರಗೊಂಡಿತು ಎಂದರು.
ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ 20 ಸಾವಿರ ಹಾಗೂ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ 50ಸಾವಿರ ಮತಗಳ ಅಂತರದಿಂದ ನಿಶ್ಚಿತವಾಗಿಯೂ ಗೆಲುವು ಸಾಧಿಸುತ್ತಾರೆ. ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿ ಶಾಸಕರ ವಿರುದ್ಧವೇ ಕುತಂತ್ರ ಮಾಡುತ್ತಿದ್ದ ಲಕ್ಷ್ಮಣ ಸವದಿ ಬಿಜೆಪಿ ತೊರೆದಿರುವುದು ಬಿಜೆಪಿ ಸ್ವಚ್ಚವಾಗಿದೆ ಎಂದ ಅವರು ರಾಜು ಕಾಗೆ ಸ್ಚತಂತ್ರನಲ್ಲ ಅವರು ಲಕ್ಷ್ಮಣ ಸವದಿ ಕೈ ಗೊಂಬೆ ಇಂತಹ ವ್ಯಕ್ತಿ ಶಾಸಕನಾಗಲು ಅನರ್ಹ. ಹೀಗಾಗಿ ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಗವಾಡ ಬಿಜೆಪಿ ಅಧಿಕೃತ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮಾತನಾಡಿ ಕಾಗವಾಡ ಮತಕ್ಷೇತ್ರದಲ್ಲಿ ನಾನು ರಸ್ತೆ, ಕುಡಿಯುವ ನೀರು, ನೀರಾವರಿ, ರಸ್ತೆ, ಶಿಕ್ಷಣ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳ ಮೂಲಕ ಜನಪರ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಕ್ಕಾಗಿ 3000 ಕೋಟಿಗೂ ಅಧಿಕ ಅನುದಾನ ವಿನಿಯೋಗಿಸಿರುವೆ ಎಂದ ಅವರು ಒಂದು ವೇಳೆ ಇನ್ನೊಂದು ವರ್ಷದ ಅವಧಿಗೆ ರಮೇಶ್ ಜಾರಕಿಹೊಳಿ ನೀರಾವರಿ ಸಚಿವ ಸ್ಥಾನದಲ್ಲಿದ್ದರೆ ಖಿಳೇಗಾಂವ ಬಸವೇಶ್ವರ ಯೋಜನೆ ಪೂರ್ಣಗೊಂಡು ಒಂದು ವರ್ಷವಾಗುತ್ತಿತ್ತು ಎಂದರು.
ಈ ಯೋಜನೆ ಪೂರ್ಣಗೊಳ್ಳದಂತೆ ಅನೇಕರು ಸಾಕಷ್ಟು ಅಡತಡೆ ಮಾಡಿದರು. ಆದರೂ ಕೂಡ ಈ ಯೋಜನೆ ನಾನು ಪೂರ್ಣಗೊಳಿಸಿರುವೆ ಎಂದ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರಾಜಕೀಯ ಮಾಡುವವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇನೆ ಎಂದರು.
ಅನಂತಪುರ ಬಿಜೆಪಿ ಮುಖಂಡ ದಾದಾ ಶಿಂಧೆ ಮಾತನಾಡಿ, ಕಾಗವಾಡ ಮತಕ್ಷೇತ್ರದ ಇತಿಹಾಸದಲ್ಲಿಯೇ ಶ್ರೀಮಂತ ಪಾಟೀಲ ಅಧಿಕಾರವಧಿಯಲ್ಲಿ ದಾಖಲೆ ಮಟ್ಟದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸಿದ್ದಾರೆ. ಅನಂತಪುರ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರೆ್ಡಯಾಗಿರುವುದು ನಮಗೆಲ್ಲ ಬಲ ಬಂದಿದೆ ಎಂದರು.
ಅನಂತಪುರ ಗ್ರಾಮದ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಧುರೀಣ ಇಮಾಮ ಹುಸೇನ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಲ್ಪ ಸಂಖ್ಯಾತ ಸಮಾಜ ಬಾಂಧವರು ಬಿಜೆಪಿ ಸೇರೆ್ಡಗೊಂಡರು. ಪ್ರಚಾರ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶಿರಗುಪ್ಪಿ ಗ್ರಾಮದ ಶಿವಾನಂದ ಪಾಟೀಲ ಮಾತನಾಡಿದರು. ಕೆ.ಎಮ್.ಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ಧುರೀಣರಾದ ಭಾವುಸಾಹೇಬ ಜಾಧವ, ಚಂದ್ರಶೇಖರ ಕವಟಗಿ, ಈಶ್ವರ ಕುಂಬಾರೆ, ಮಹಾದೇವ ಕೋರೆ, ಸುಶಾಂತ ಪಾಟೀಲ, ತಮ್ಮಣ್ಣ ಪೂಜಾರಿ, ಅಪ್ಪಾಸಾಹೇಬ ಮಳಮಳಸಿ, ತಮ್ಮಣ್ಣಾ ಪಾರಶೆಟ್ಟಿ, ಕುಮಾರ ಹಬಗುಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.