ರೌಡಿ ಶೀಟರಗಳ ಮನೆ ಮೇಲೆ ದಾಳಿ
ಬೈಲಹೊಂಗಲ 18: ಪಟ್ಟಣದ ರೌಡಿಶಿಟರಗಳ ಮನೆ ಮೇಲೆ ರವಿವಾರ ಪೋಲಿಸರು ದಾಳಿ ನಡೆಸಿ ಪರೀಶೀಲನೆ ಮಾಡಿದರು.
ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ರೌಡೀಶೀಟರಗಳ ಮನೆ ಮೇಲೆ ದಾಳಿ ಮಾಡಿ, ಮನೆಗಳಲ್ಲಿ ಆಯುಧ, ಅಸ್ತ್ರಗಳ ಬಗ್ಗೆ ಶೋಧನೆ ನಡೆಸಿದರು. ಇನ್ನು ಮುಂದೆ ಯಾರೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು, ಮನೆಗೆ ಒಳ್ಳೆಯ ಮಗನಾಗಿರಬೇಕು ಮತ್ತು ಸಾರ್ವಜನಿಕ ವಲಯದಲ್ಲಿ ವಿಕೃತಿ ಮೆರೆದು, ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳುಮಾಡದೇ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡು ಭವಿಷ್ಯ ಹಾಳು ಮಾಡಿಕೊಳ್ಳದೇ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕು ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ ರೌಡೀಶೀಟರಗಳಿಗೆ ತಿಳುವಳಿಕೆ ಪಾಠ ಮಾಡಿದರು.
ಇನ್ನು ಮುಂದೆ ಯಾರೇ ಕಾನೂನು ಕೈಗೆತ್ತುಕೊಳ್ಳುವ ಕೆಲಸ ಮಾಡಿದರೆ ಆಂತವರ ಮೇಲೆ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.