ಅಥಣಿ

ರಸ್ತೆ ಕಾಮಗಾರಿಗೆ ಕುಮಠಳ್ಳಿ ಚಾಲನೆ

ರಸ್ತೆ ಕಾಮಗಾರಿಗೆ ಕುಮಠಳ್ಳಿ ಚಾಲನೆ

ಸಂಬರಗಿ ನವೆಂಬರ್ 04: ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಏಳು ನೂರು ಕೋಟಿ ರೂಪಾಯಿ ಕಾಮಗಾರಿ ಚಾಲನೆಯಲ್ಲಿದ್ದು, ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇನೆ. ರಾಜ್ಯದಲ್ಲಿ ಅಥಣಿ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಚಿಕ್ಕೂಡ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರಸ್ತೆ ಡಾಂಬರೀಕರಣ, ಸಮುದಾಯ ಭವನ, ಶಾಲಾ ಕೊಠಡಿ ನಿರ್ಮಾಣ ಹಾಗೂ ಹಳ್ಳದ ಮೇಲೆ ಬಾಂದಾರ ನಿರ್ಮಾಣ ಮಾಡಿ ನೀರು ಸಂಗ್ರಹಿಸಿ ರೈತರಿಗೆ ಅನುಕೂಲ ಮಾಡಲಾಗುವುದು. ಕೃಷ್ಣಾ ತೀರದ ಅನೇಕ ಗ್ರಾಮಗಳಲ್ಲಿ ಸವಳು-ಜವಳು ಪ್ರಮಾಣ ಹೆಚ್ಚಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇವರಿಗೆ ಈ ಭಾಗದ ರೈತ ನಿಯೋಗ ಮುಖಾಂತರ ಭೆಟ್ಟಿ ಮಾಡಿ ಮನವಿ ಸಲ್ಲಿಸಿ ಸವಳು-ಜವಳು ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿ ಗ್ರಾಮದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಅಮ್ಮಾಜೇಶ್ವರಿ ಕೊಟ್ಟಲಗಿ ಯಾತ ನೀರಾವರಿ ಯೋಜನೆ ಕೆಎನ್‍ಎನ್ ಬೋರ್ಡ್ ಕಮೀಟಿಯಲ್ಲಿ 2400 ಕೋಟಿ ರೂಪಾಯಿ ಅನುದಾನಕ್ಕೆ ಅನುಮತಿ ನೀಡಿದೆ. ಈ ಭಾಗದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಹಸಿರು ಕ್ರಾಂತಿ ಮಾಡುತ್ತೇನೆ ಎಂದು ಹೇಳಿದರು.

ಹುಲಗಬಳ, ದರೂರ, ಖವಟಕೊಪ್ಪ, ಚಿಕ್ಕೂಡ, ಅವರಖೋಡ, ದೊಡವಾಡ, ಶಿರಹಟ್ಟಿ, ಪಡತರವಾಡಿ, ಯಲಿಹಡಲಗಿ, ಅಡಹಳ್ಳಿ ಕೊಟ್ಟಲಗಿ ಈ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರ್ಜರಿಯಲ್ಲಿ ಸಾಗುತ್ತಿವೆ.

ತಾ.ಪಂ ಸದಸ್ಯ ದಿಲೀಪ ಕಾಂಬಳೆ, ವಿಠ್ಠಲ ಮಾಚಕನೂರ, ಗುಂಡು ರಡ್ರಟ್ಟಿ, ಬಸಯ್ಯಾ ಮಠಪತಿ, ಅಶೋಕ ಮುಳ್ಳೂರ, ಸುರೇಶ ಮಾಯಣ್ಣವರ, ಈರಣ್ಣಾ ವಾಲಿ, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಚವ್ಹಾನ, ಕಿರಿಯ ಅಭಿಯಂತರರು ಎ.ಜಿ ಮುಲ್ಲಾ, ಎಸ್. ಸಾಗವಾಣೆ ಮತ್ತಿತರರು ಪಾಲ್ಗೊಂಡಿದ್ದರು.

ಸುದ್ದಿ ಓದಿ