ಬೈಲಹೊಂಗಲ

ಅದ್ಧೂರಿಯಾಗಿ ಶ್ರೀರಾಮನವಮಿ ಆಚರಣೆ

ಅದ್ಧೂರಿಯಾಗಿ ಶ್ರೀರಾಮನವಮಿ ಆಚರಣೆ

ಲೋಕದರ್ಶನ ವರದಿ 


ಬೈಲಹೊಂಗಲ 11:  ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಶ್ವಹಿಂದೂ ಪರಿಷದ್, ಬಜರಂಗದಳ ತಾಲೂಕು ಘಟಕದಿಂದ ಭಾನುವಾರ ಶ್ರೀರಾಮನವಮಿ ಆಚರಣೆ ಅದ್ಧೂರಿಯಾಗಿ ನಡೆಯಿತು. 

ಹಿಂದೂ, ಮುಸ್ಲಿಂ ಬಾಂದವರು ಸೌಹಾರ್ದಯುತವಾಗಿ ರಾಮನ ಭಾವಚಿತ್ರಕ್ಕೆ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಿ ರಾಮನ ಸ್ಮರಣೆ ಮಾಡಿದರು. ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ‘ಸಮಾನತೆ, ಸಹೋದರತ್ವವನ್ನು ಸಾರುವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನವನ್ನು ಅತ್ಯಂತ ಸಂಭ್ರಮ, ಉಲ್ಲಾಸದಿಂದ ಒಟ್ಟಾಗಿ ಆಚರಿಸಿರುವುದು ಸಂತಸ ತಂದಿದೆ. ಶ್ರೀರಾಮ ದೇವರ ಅನುಗ್ರಹವು ಸದಾ ಎಲ್ಲರ ಮೇಲೂ ಇರಲಿ’ ಎಂದರು. 

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ವಿಶ್ವಹಿಂದೂ ಪರಿಷದ್ ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ ಮಾತನಾಡಿದರು. ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯವಹಿಸಿದ್ದರು.  

ನಟ ಶಿವರಂಜನ ಬೋಳನ್ನವರ, ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ಉದ್ಯೆಮಿ ವಿಜಯ ಮೆಟಗುಡ್ಡ, ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಸುನೀಲ ಮರಕುಂಬಿ, ರಾಜು ಬಡಿಗೇರ, ವಿವೇಕಾನಂದ ಪೂಜಾರ, ಅಶೋಕ ಸವದತ್ತಿ, ಮಲ್ಲಿಕಾರ್ಜುನ ಏಣಗಿಮಠ, ಮುರುಳಿಧರ ಮಾಳೋದೆ, ಶ್ರೀಶೈಲ ಯಡಳ್ಳಿ, ಶಿವಾನಂದ ಬೆಳಗಾವಿ, ದೀಪಕ ಶೆಟ್ಟಿ, ಮಂಜುನಾಥ ಕಮ್ಮಾರ, ದಯಾನಂದ ಗೆಜ್ಜಿ, ಸುಭಾಸ ತುರಮರಿ, ರವಿ ತುರಮರಿ, ಮಹಾಂತೇಶ ಹೊಸೂರ, ಸುನೀಲ ಮರಕುಂಬಿ, ಮಲ್ಲಿಕಾರ್ಜುನ ವಕ್ಕುಂದಮಠ, ಮಂಜುನಾಥ ಜ್ಯೋತಿ, ಈರ​‍್ಪ ಕಾಡೇಶನವರ, ಆನಂದ ತೋಟಗಿ, ಆನಂದ ಹಿರೇಮಠ, ರವಿ ವನ್ನೂರ, ಬಸವರಾಜ ಕಟ್ಟಿಮನಿ, ಈರಣ್ಣಾ ಮೆಳ್ಳಿಕೇರಿ, ಬಸವರಾಜ ಸರಾಯದ, ಅನೇಕರು ಇದ್ದರು. 


ಸುದ್ದಿ ಓದಿ