ಶ್ರೀಮಂತ ಪಾಟೀಲ ಗೆಲುವು ನಿಶ್ಚಿತ: ಬಾಲಚಂದ್ರ ಜಾರಕಿಹೊಳಿ
ವೆಂಕಟೇಶ ದೇಶಪಾಂಡೆ
ಅಥಣಿ 29: ಪ್ರಗತಿಯ ಚಿಂತಕ ಶ್ರೀಮಂತ ಪಾಟೀಲರು ಸಜ್ಜನ, ಸೌಮ್ಯ ಸ್ವಭಾವದವರಾಗಿದ್ದು, ಇವರನ್ನು ಮೇ.10 ರಂದು ಮತ ನೀಡುವ ಮೂಲಕ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡಲು ಸಹಕರಿಸಬೇಕು ಎಂದು ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು. ಅವರು ಮದಭಾವಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಬಿಜೆಪಿ ಒಳ ಮೀಸಲಾತಿ ಕೊಡುವ ಮೂಲಕ ದಲಿತ ಬಂಧುಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಷ್ಟೇ ಅಲ್ಲ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಕೂಡ ಬಿಜೆಪಿ ಸರಕಾರ ಹೆಚ್ಚಿಸಿದೆ ಜೊತೆಗೆ ಲಿಂಗಾಯತ ಸಮಾಜಕ್ಕೂ ಕೂಡ ಮೀಸಲಾತಿ ಹೆಚ್ಚಿಸಿದ್ದು ನಮ್ಮ ಸರಕಾರವೇ ಎಂದರು.
ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ ಅನುಷ್ಠಾನಗೊಳ್ಳಲು ಸಾಧ್ಯವೇ ಇಲ್ಲ. ಇದಕ್ಕಾಗಿ 60 ಸಾವಿರ ಕೋಟಿ ಬೇಕು ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ತರುವರು ಎಂದು ಪ್ರಶ್ನಿಸಿದರು.
ಕಾಗವಾಡ ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀಮಂತ ಪಾಟೀಲ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಅನುಷ್ಠಾನಗೊಳಿಸಿದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮೆಚ್ಚಿ ಕಾಗವಾಡ ಮತಕ್ಷೇತ್ರದ ಎಲ್ಲ ಗ್ರಾಮ, ಪಟ್ಟಣಗಳಲ್ಲಿ ಮತದಾರರಿಂದ ವ್ಯಾಪಕ ಬೆಂಬಲ ಸಿಗುತ್ತಿದೆ ಎಂದರು. ಹಿಂದೆಂದೂ ಕಾಣದಷ್ಟು ಮದಭಾವಿ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಭೆಯಲ್ಲಿ ಜನ ಸೇರಿರುವುದನ್ನು ಗಮನಿಸಿದರೆ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಕಾಗವಾಡ ಕ್ಷೇತ್ರದ ಅಭಿವೃದ್ಧಿ ಗಾಗಿ 3000 ಕೋಟಿ ಅನುದಾನ ರಸ್ತೆ, ನೀರಾವರಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ತಗಳಲ್ಲಿ ಜನಪರ ಕಾರ್ಯಗಳ ಅನುಷ್ಠಾನಕ್ಕೆ ಆದ್ಯತೆ ನೀಡಿರುವೆ ಎಂದ ಅವರು ಕೆಲ ವಿರೋಧ ಪಕ್ಷದವರು ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ ನನ್ನ ಮೇಲೆ ಮಾಡಿದ ಆರೋಪನ್ನು ಸಾಬೀತು ಮಾಡಲಿ ಎಂದು ಸವಾಲೆಸೆದರು.
ಶಿವನೂರ ಬಿಜೆಪಿ ಮುಖಂಡ ತಮ್ಮಣ್ಣ ಪೂಜಾರಿ ಮಾತನಾಡಿ, ಹಿಂದುತ್ವದ ಪ್ರಭಾವ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರ ಅಭಿವೃದ್ಧಿ ಹಾಗೂ ಜನಪರ ಕಾಳಜಿ ಮೆಚ್ಚಿ ನಾನು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರೆ್ಡಯಾಗಿರುವೆ ಎಂದ ಅವರು ನನ್ನ ಕೆಲ ವಿರೋಧಿಗಳು ನನ್ನ ಬಗೆಗೆ ಅಪ ಪ್ರಚಾರ ಮಾಡುತ್ತಿದ್ದು, ನಾನು ಸಿದ್ಧೇಶ್ವರ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಬಿಜೆಪಿ ಸೇರೆ್ಡ ಯಾಗಲು ಶ್ರೀಮಂತ ಪಾಟೀಲರಿಂದ ಒಂದು ಪೈಸೆ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಚಾರ ಸಭೆಯಲ್ಲಿ ಕೆ.ಎಮ್.ಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ಬಿಜೆಪಿ ಧುರೀಣರಾದ ಆರ್.ಎಮ್.ಪಾಟೀಲ, ಮಹಾದೇವ ಕೋರೆ, ಬಾಳು ಮಗದುಮ್, ಸುಶಾಂತ ಪಾಟೀಲ, ಸಂಜಯ ತೆಲಸಂಗ, ದಾದಾ ಪಾಟೀಲ, ಮುರಿಗೆಪ್ಪ ಮಗದುಮ್, ಅಪ್ಪಾಸಾಹೇಬ ಮಳಮಳಸಿ, ಈಶ್ವರ ಕುಂಬಾರೆ, ಡಿ.ಕೆ.ಪವಾರ, ಸತ್ಯಪ್ಪಾ ಬಾಗೆನ್ನವರ, ಭಾವುಸಾಹೇಬ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಿಜೆಪಿ ಅಭಿವೃದ್ಧಿ ಮೆಚ್ಚಿ ನೂರಾರು ಯುವಕರು, ಧುರೀಣರು ಕಾಂಗ್ರೆಸ್ ತೊರೆದು ಶ್ರೀಮಂತ ಪಾಟೀಲ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಸೇರೆ್ಡಯಾದರು.