ಬಳ್ಳಾರಿ

ವಸತಿ ಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿಯನ್ನು ಪುನರಾಂಬಿಸಿ: ಕಟ್ಟೇಸ್ವಾಮಿ

ವಸತಿ ಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿಯನ್ನು ಪುನರಾಂಬಿಸಿ: ಕಟ್ಟೇಸ್ವಾಮಿ

ಬಳ್ಳಾರಿ 2: ನಗರದಲ್ಲಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಮತ್ತು ರಾಜ್ಯ ಕರಾಟೆ ಶಿಕ್ಷಕರ ಸಂಘ ವತಿಯಿಂದ ಜಿಲ್ಲಾ ಕಛೇರಿ ಆವರಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಏರಿ​‍್ಡಸಲಾಗಿತ್ತು.    ಇದೇ ವೇಳೆಯಲ್ಲಿ  ಕಟ್ಟೇಸ್ವಾಮಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವರು ಮಾತನಾಡಿ,ಹಿಂದೆ ತಮ್ಮ ನೇತೃತ್ವದ ಅಧಿಕಾರದಲ್ಲಿದ್ದ ತಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ತಮ್ಮದೇ ಮುತುವರ್ಜಿಯಲ್ಲಿ ಜಾರಿಗೆ ತಂದಿದ್ದ ರಾಜ್ಯದ ಸರ್ಕಾರಿ ಪ್ರೌಢ ಶಾಲೆ  ಮತ್ತು ವಸತಿ ಶಾಲಾ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿಯನ್ನು ಪುನರಾಂಬಿಸಬೇಕು, ಏಕೆಂದರೆ ರಾಜ್ಯದಲ್ಲಿ ಕೆಲವು ದುಷ್ಕರ್ಮಿಗಳಿಂದ  ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಮಾನಭಂಗ ಮುಂತಾದ ಅಮಾನವೀಯ ದೌರ್ಜನ್ಯಗಳು ನಡೆದಿದ್ದವು. ಆ ಘಟನೆಗಳಿಂದ ಅಗಾಧವಾಗಿ ನೊಂದಿದ್ದ ತಾವುಗಳು ಇಂತಹ ಕೃತ್ಯಗಳು ರಾಜ್ಯದಲ್ಲಿ ಇನ್ನೂ ಮುಂದೆ ನಡೆಯಬಾರದೆಂದು, ದೃಢ ನಿರ್ಧಾರಕ್ಕೆ ಬಂದು, ಅತ್ಯಾಚಾರಿಗಳಿಂದ ರಕ್ಷಣೆ ಮಾಡಿಕೊಳ್ಳಲು ಮತ್ತು ದುಷ್ಟರನ್ನು ಮಟ್ಟ ಹಾಕಲು ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡಬೇಕೆಂದು ತಿರ್ಮಾನಿಸಿದರು.  

ರಾಜ್ಯದಲ್ಲಿನ ಎಲ್ಲಾ ಆರ್‌.ಎಮ್‌.ಎಸ್‌.ಎ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಮಾತ್ರ ಕರಾಟೆ ತರಬೇತಿಯನ್ನು ಆರಂಭಿಸಿ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದಿರಿ. ಮುಂದೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಕಿತ್ತೂರು ರಾಣಿಚೆನ್ನಮ್ಮ ಹಾಗೂ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಮತ್ತು ಮೇಟ್ರಿಕ್ ನಂತರದ ಮತ್ತು ಮೇಟ್ರಿಕ್ ಪೂರ್ವದ ವಸತಿ ಶಾಲೆಗಳಿಗೂ ಅದನ್ನು ವಿಸ್ತರಿಸಬೇಕು. ಹಾಗೂ  ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕರಾಟೆ ಪ್ರದರ್ಶನವನ್ನು ಏರಿ​‍್ಡಸಿದ್ದು, ಇಡೀ ರಾಜ್ಯದ ಮತ್ತು ಪಾಲಕರು ಮತ್ತು ಪೋಷಕರು ಇದನ್ನು ಮೆಚ್ಚಿಕೊಂಡು ತಮ್ಮನ್ನು ಕೊಂಡಾಡಿದರು.ಈಗ ಸದರಿ ತರಬೇತಿ ಕಾರಣಾಂತರಗಳಿಂದ ನಿಂತು ಹೋಗಿದೆ. ತಮ್ಮಿಂದ ಆರಂಭವಾದ ಈ ಯೋಜನೆಯು ಈಗ ಪುನಃ ತಮ್ಮಿಂದಳೆ ಅದನ್ನು ಪುನಃ ಆರಂಭಿಸುವದರಿಂದ ಹೆಣ್ಣು ಮಕ್ಕಳಿಗೆ ದೈರ್ಯ ನೀಡುವದು ಅಲ್ಲದೆ ನಮ್ಮಂತಹ ಬಡ ನಿರುದ್ಯೋಗಿ ಕರಾಟೆ ತರಬೇತಿದಾರರ ಜೀವನ ಮತ್ತು ಅವರ ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತದೆ.  

ಅಲ್ಲದೆ ತರಬೇತಿ ನೀಡುವುದರಿಂದ ಬರುವ ಗೌರವಧನದಿಂದ ನಮ್ಮ ಬದುಕು ನಡೆಯುತ್ತದೆ. ಮತ್ತು ತಮ್ಮ ಕೃಪೆಯಿಂದ ನಮ್ಮ ಸುಂದರ ಜೀವನ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ.ಕಾರಣ ರಾಜ್ಯದ ಎಲ್ಲಾ ಸರ್ಕಾರಿ ಅರೇ ಸರ್ಕಾರಿ, ಅನುದಾನಿತ ಪ್ರೌಡಶಾಳೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ಮರಳಿ ಕರಾಟೆ ತರಬೇತಿಯನ್ನು ಕಡ್ಡಾಯ ಗೊಳಿಸಲು ತಾವುಗಳು ಹೆಚ್ಚಿನ ಮಹತ್ವ ನೀಡಿ ಪುನರಾರಂಭಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ  ಮಹಮ್ಮದ್ ನದೀಮ್ ಮಂಗಳೂರು ರಾಜ್ಯಾಧ್ಯಕ್ಷರು, ರವಿ ಸಾಲಿಯನ್ ರಾಜ್ಯ ಪ್ರದಾನ ಕಾರ್ಯದರ್ಶಿ ಉಡುಪಿ, ಶಿವಕುಮಾರ್ ಶಾರದಳ್ಳಿ ರಾಜ ವಕ್ತರಾರು  ವಿಜಯಪುರ, ಮೌನೇಶ್ ವಡ್ಡಟ್ಟಿ ರಾಜ್ಯ ವಕ್ತಾರರು ಕೊಪ್ಪಳ, ಕಟ್ಟೇಸ್ವಾಮಿ ರಾಜ್ಯ ಸಂಘಟನಾ ಕಾರ್ಯದರ್ಶಿ,ಸುರೇಶ್ ಡಿ ಜಿಲ್ಲಾಧ್ಯಕ್ಷರು ಇನ್ನು  ಮುಂತಾದ ಕರಾಟೆ ತರಬೇತಿದಾರರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ