ಇಂಡಿ

ರಾಷ್ಟ್ರದ ಸಂವಿಧಾನಕ್ಕೆ ಗೌರವದಿಂದ ನಡೆದುಕೊಳ್ಳಿ: ಕಲ್ಮನಿ

ರಾಷ್ಟ್ರದ ಸಂವಿಧಾನಕ್ಕೆ ಗೌರವದಿಂದ ನಡೆದುಕೊಳ್ಳಿ: ಕಲ್ಮನಿ

ಇಂಡಿ 27: ರಾಷ್ಟ್ರದ ಸಂವಿಧಾನಕ್ಕೆ ಪ್ರತಿಯೊಬ್ಬರೂ ಗೌರವದಿಂದ ನಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಪ್ರೌಡ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದ ಬಳಿಕ ಮಾತನಾಡಿದರು.

ಸಂವಿಧಾನವೆಂದರೆ ನಮ್ಮ ದೇಶದ ಕಾನೂನು. 1946ರಲ್ಲಿ ಸಂವಿಧಾನ ಸಭೆ ರಚನೆಯಾಗಿ 2 ವರ್ಷ 11 ತಿಂಗಳ 18 ದಿನ ಸುದೀರ್ಘ ಚರ್ಚಿಸಿ ನವೆಂಬರ್ 26, 1949 ರಂದು ಸಂಸತ್ತಿನ ಶಾಸಕಾಂಗ ಸಭೆಯಲ್ಲಿ ಸಂವಿಧಾನ ಅಂಗೀಕರಿಸಲಾಯಿತು. ಈ ದಿನ ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಶಿಕ್ಷಕರಾದ ವ್ಹಿ.ಜಿ.ಚವ್ಹಾಣ, ಬಸವರಾಜ ಪಲ್ಲೆದ, ಸಚೀನ ಅಡಿಗುಂಡಿ, ಸುನೀಲಕುಮಾರ ವಿ.ಆರ್, ಪ್ರಕಾಶ ಕಲ್ಮನಿ, ಶಿವಾನಂದ ಕಲ್ಮನಿ, ನಾಗೇಶ ಕಲಶೆಟ್ಟಿ, ಶ್ರೀದೇವಿ ಕಲ್ಮನಿ, ತಾರಾ ಸುನೀಲಕುಮಾರ, ಜಿ.ಎ. ಬಿರಾದಾರ, ಬಿ.ಕೆ. ಉಕ್ಕಲಿ, ಎಸ್.ಎಂ. ಭಾಸಗಿ, ಬಿ.ಎಸ್. ನಾಟೀಕಾರ, ರಾಜಶ್ರೀ ಸಂಗಮ್ ಹಾಗೂ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಓದಿ