ಅಥಣಿ

ಸ್ಥಗಿತಗೊಂಡಿರುವ ರಸ್ತೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಮನವಿ

ಸ್ಥಗಿತಗೊಂಡಿರುವ ರಸ್ತೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಮನವಿ
ಖಿಳೇಗಾಂವ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ರಸ್ತ

ಸಂಬರಗಿ : ಖಿಳೇಗಾಂವ ಗ್ರಾಮದಲ್ಲಿ  ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಖಿಳೆಗಾಂವ ಗ್ರಾಮದ ಪಿ.ಕೆ.ಪಿ.ಎಸ್. ಅಧ್ಯಕ್ಷ ಅಣ್ಣಪ್ಪ ನಿಂಬಾಳ ಇವರ ನೇತೃತ್ವದಲ್ಲಿ ಕೆನಾಲ ಬದಿಗೆ ಸ್ಥಗಿತಗೊಂಡಿರುವ ರಸ್ತೆಯನ್ನು ಪ್ರಾರಂಭಿಸಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ನಿಂಬಾಳ ಮಾತನಾಡಿ ಈ ಮುಂಚಿತವಾಗಿ ಕೆನಾಲ ಬದಿಗೆ ರಸ್ತೆ ಇದ್ದು ಜನರಿಗೆ ಹೋಗಲು ಅನೂಕೂಲವಾಗಿತ್ತು. ರಸ್ತೆ ಸ್ಥಗಿತಗೊಂಡ ಕಾರಣ ಜನರಿಗೆ ಭಾರಿ ತೊಂದರೆಯಾಗಿದೆ. ಮರಳಿ ರಸ್ತೆ ಪ್ರಾರಂಭಿಸಬೇಕೆಂದು ಅವರು ವಿನಂತಿಸಿದರು.ಈ ವೇಳೆ ರಮೇಶ ಪಾಟೀಲ, ಹೊನ್ನಪ್ಪ ಭಗಲಿ, ಧರೆಪ್ಪ ದೆವಾಣಗೋಳ ಉಪಸ್ಥಿತರಿದ್ದರು.

 


ಸುದ್ದಿ ಓದಿ