ಬುಡರಕಟ್ಟಿಯ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಮನವಿ
ಬೈಲಹೊಂಗಲ 08: ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಡೆಸಲಾಗುತ್ತಿರುವ ಎಸ್.ಎಸ್.ಪಾಟೀಲ ಅನುದಾನಿತ ಪ್ರೌಢಶಾಲೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಶಾಲೆಯ ಸ್ಥಳೀಯ ಸಲಹಾ ಮಂಡಳಿ ಸದಸ್ಯರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಸಂಸ್ಥೆಯ ಅಧ್ಯಕ್ಷರಾದ ಬೈಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಸವಟಗಿ, ಮಹಾಂತೇಶ ಕಮತ ಮೊದಲಾದವರು ಮಾತನಾಡಿ ಸುಮಾರು 200 ಕ್ಕೂ ಹೆಚ್ಚು ವಿದ್ಯಾಥರ್ಿಗಳ ಸಂಖ್ಯೆ ಹೊಂದಿರುವ ಶಾಲೆಯಲ್ಲಿ ವಿದ್ಯಾಥರ್ಿನಿಯರಿಗಾಗಿ ಶೌಚಾಲಯ ವ್ಯವಸ್ಥೆ ಇಲ್ಲ, ಆವರಣ ಗೋಡೆ ಇಲ್ಲ ಇದರಿಂದ ಶಾಚಾಲಯ ಬಳಸಲು ವಿದ್ಯಾಥರ್ಿನಿಯರು ಶಾಲೆಯ ಹಿಂದಿನ ಹೊಲದ ಕಡೆ ತೆರಳುವುದರಿಂದ ತೀವೃ ಮುಜುಗರಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ಮನೆಯಲ್ಲಿ ಪಾಲಕರ ಮುಂದೆ ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಂಸ್ಥೆಯ ಹಿಂದಿನ ಕಾಯರ್ಾಧ್ಯಕ್ಷರಾದ ಸಿ.ಎಸ್.ಸಾಧುನವರ ಹಾಗೂ ಆಡಳಿತಾಧಿಕಾರಿ ರವೀಂದ್ರ ಪಾಟೀಲ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ನಮ್ಮ ಗ್ರಾಮಸ್ಥರಿಂದ ಸಂಗ್ರಹಿಸಿರುವ ಸುಮಾರು 8 ಲಕ್ಷ ರೂಪಾಯಿ ಹಣವನ್ನು ಸಂಸ್ಥೆಯವರು ತಮ್ಮ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ತಿಳಿದು ಬಂದಿದ್ದು ಹೀಗೇನಾದರೂ ದುರ್ಬಳಕೆ ಆಗಿದ್ದು ಗೊತ್ತಾದರೆ ಶಾಲೆಯನ್ನು ಬಂದ್ ಮಾಡಿ ಗ್ರಾಮಸ್ಥರೆಲ್ಲರೂ ಸೇರಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಮತ್ತು ಶಾಲೆಯನ್ನು ಸರಕಾರದ ಸುಪದರ್ಿಗೆ ವಹಿಸಬೇಕು ಎಂಬ ಚಿಂತನೆ ನಡೆಸಿದ್ದೇವೆ ಆದ್ದರಿಂದ ಸಂಸ್ಥೆಯ ಆಡಳಿತ ಮಂಡಳಿಯವರು ಕೂಡಲೆ ಎಚ್ಚೆತ್ತಕೊಂಡು ಆದಷ್ಟು ಶೀಘ್ರ ಪ್ರೌಢಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಪ್ರಮುಖರಾದ ದಾನಪ್ಪ ತುರಮರಿ, ದೇವನಗೌಡ ಪಾಟೀಲ. ಮಹಾವೀರ ಪಾಟೀಲ, ಕಲ್ಲಪ್ಪ ಕಿತ್ತೂರ,ಗೌಡಪ್ಪ ಸವಟಗಿ, ಮಹೇಶ ಕಾದ್ರೊಳ್ಳಿ, ಬಾಳಪ್ಪ ಶಿವಬಸನ್ನವರ ಉಪಸ್ಥಿತರಿದ್ದರು.