ಪರೀಕ್ಷೆ ನಡೆಸುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಮನವಿ
ಇಂಡಿ 19; ಪದವಿ ಪೂರ್ವ ಶಿಕ್ಷಣ ಇಲಾಖೆ ಮಧ್ಯಂತರ ಪರೀಕ್ಷೆ ನಡೆಸುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ, ಇಂಡಿ ಪಟ್ಟಣದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ನೂರಾರು ಜನ ವಿದ್ಯಾರ್ಥಿಗಳು ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ಮಾಡಿ ಉಪ ತಹಶೀಲ್ದಾರ ಆರ್.ಎಸ್.ರೇವಡಿಗಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇತ್ತೀಚೆಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಬೊಧನಾ ಕಾರ್ಯ ಸಮರ್ಕವಾಗಿ ನಡೆದಿಲ್ಲ. ವಿದ್ಯಾರ್ಥಿಗಳ ವಾಸ್ತವ ಸ್ಥಿತಿಯನ್ನು ಅರಿಯದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಇಲಾಷಖೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ. ಈ ಸದ್ದೇ ಪರೀಕ್ಷೆ ನಡೆಸುವದು ಬೇಡ. ಇಲಾಖೆ ಹೊರಡಿಸಿರುವ ಆದೇಶ ಹಿಂಪಡೆಯಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿವಾಜಿ ಜಾಧವ, ಈರಣ ಸಿಂದಗಿ, ಮಹೇಶ ಬಿರಾದಾರ, ಪ್ರಪುಲ್ಲ ಕಟ್ಟೀಮನಿ, ರವಿ ಜಾಧವ, ಗಣೇಶ ಹಂಜಗಿ, ಸಚಿನ್ ದಾನಗೊಂಡ, ಪರಶುರಾಮ ಕಟ್ಟೀಮನಿ, ಶಿಲ್ಲಾ ಹಂಜಗಿ, ಭಾಗ್ಯಶ್ರೀ ಬಿರಾದಾರ, ಅಶ್ವಿನಿ ಪಾಂಡ್ರೆ, ಭುವನೇಶ್ವರಿ ಅಳಗಿಕರ, ಮಡೇಕ ಉಸ್ತಾದ, ಸೌಮ್ಯ ಸಾಲೋಟಗಿ ಮತ್ತಿತರರು ಇದ್ದರು.