ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಆಗ್ರಹಿಸಿ ಮನವಿ
ಬೈಲಹೊಂಗಲ15: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮೂಲಕ ತಾಲೂಕಿನ ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರಾದ ಎಸ್.ವಿ.ಹಿರೇಮಠ, ಡಾ.ಮರಿಗೌಡ ಚೋಬಾರಿ ಎಸ್.ಆರ್.ಖನ್ನಿನಾಯ್ಕರ, ಮಹೇಶ ಕರೀಕಟ್ಟಿ, ಡಾ.ಆರ್.ವೈ.ಗೌಡರ, ಶೇಖರ ಗಡಾದ, ಫಕೀರ್ಪ ಕೋಣಿನವರ, ಸಂಗಪ್ಪ ಹುಲಗನ್ನವರ, ವೀರಣ್ಣ ಅಂಗಡಿ, ನಿರ್ಮಲಾ ಸತ್ತಿಗೇರಿ, ಮೀನಾಕ್ಷಿ ವಕ್ಕುಂದಮಠ, ನಂದೀಶ ಕರಾಳೆ, ರಾಜಶೇಖರ ವಡ್ಲಿ, ಮಲ್ಲಿಕಾರ್ಜುನ ದಾಸೋಗ, ರಮೇಶ ಯರಗಟ್ಟಿ ಇದ್ದರು.