ಕೃಷಿಕರ ಶ್ರಮ ಸಾಧನೆಯನ್ನು ಸ್ಮರಿಸಿ: ಸಾಗರ
ಇಂಡಿ 23: ಕೃಷಿಕರ ಶ್ರಮ ಸಾಧನೆಯನ್ನು ಸ್ಮರಿಸಿ,ಕೃಷಿಕರ ಭವಿಷ್ಯಕ್ಕಾಗಿ,ಉನ್ನತಿಗಾಗಿ ಕೃಷಿಯ ಯಾವುದೇ ಅಗತ್ಯತೆಗಾಗಿ ಸ್ಟೇಟ್ ಬ್ಯಾಂಕು ಕೃಷಿ ಸಾಲ ನೀಡುತ್ತಿದ್ದು ರೈತರ ಬ್ಯಾಂಕಿನಿಂದ ಅರ್ಥಿಕ ಸಹಾಯ ಪಡೆದು ತಮ್ಮ ಕೃಷಿ ಪೂರಕ ಯೋಜನೆ ರೂಪಿಸಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವೆಂಕಟ ಸಾಗರ ಹೇಳಿದರು.
ಅವರು ಗುರುವಾರ ಪಟ್ಟಣದ ಎಸ್.ಬಿ.ಆಯ್ ಆವರಣದಲ್ಲಿ ರೈತ ದಿನಾಚರಣೆ ನಿಮಿತ್ಯ ಪ್ರಗತಿಪರ ರೈತರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಸಮುದಾಯಕ್ಕೆ ಸಾಲ ನೀಡುವ ಮೂಲಕ ಕೃಷಿಗೆ ಪ್ರೋತ್ಸಾಹಿಸಿ,ರೈತ ಸಮುದಾಯದಲ್ಲಿ ಚೈತನ್ಯ ಶಕ್ತಿ ತುಂಬುವ ಹಾಗೂ ಭವಿಷ್ಯದ ಕೃಷಿ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲು ಬ್ಯಾಂಕು ಸಹಕಾರಿಸುತ್ತಿದೆ ಎಂದರು.
ಸ್ಪರ್ಧಾತ್ಮಕ ಬಡ್ಡಿ ದರ,ತ್ವರಿತ ಪ್ರಕ್ರಿಯೆ,ಕನಿಷ್ಠ ದಾಖಲೆ ಕೆಲಸ,ಯಾವುದೇ ಮುಚ್ಚಿಟ್ಟ ವೆಚ್ಚಗಳಿಲ್ಲ ಎಂದ ಅವರು ಮುದ್ರಾ ಸಾಲ, ಆಸ್ತಿ ಬೆಂಬಲಿತ ಸಾಲ,ಟ್ರ್ಯಾಕ್ಟರ್ ಸಾಲ,ಸ್ವ ಸಹಾಯ ಗುಂಪುಗಳಿಗಾಗಿ ಸಾಲ,ಕಿಸಾನ ಕ್ರೆಡಿಟ್ ಕಾರ್ಡು, ಅಗ್ರಿ ಗೊಲ್ಡ ಲೋನ ಸಾಲ ಸೇವೆಗಳು ದೊರೆಯಲಿವೆ ಎಂದರು.
ಬ್ಯಾಂಕಿನ ರವಿ ತಳವಾರ, ಮಹಾಂತೇಶ ಡೊಳ್ಳಿ ಮಾತನಾಡಿದರು. ಇದೇ ವೇಳೆ ಪ್ರಗತಿಪರ ರೈತರಾದ ಭಗವಂತ ಮೇತ್ರಿ, ಸಣ್ಣಪ್ಪ ಸಿದ್ದಪ್ಪ ಪೂಜಾರಿ, ರೂಗಿ ಗ್ರಾಮದ ಮಲ್ಲಪ್ಪಾ ಮೇತ್ರಿ, ಹಿರೇಬೇವನೂರ ಗ್ರಾಮದ ರೇವಣಯ್ಯ ಹಿರೇಮಠ, ಡಿ.ಜಿ.ನಾರಾಯಣಕರ, ಅಳ್ಳಪ್ಪ ಗಾಣಿಗೇರ ರೈತರನ್ನು ಸನ್ಮಾನಿಸಲಾಯಿತು.