ರಾಣೆಬೆನ್ನೂರ

ಕುಮಟಾ ನಗರದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಚಿಂತಾನಾಶೀಲ ಸಭೆ.

ಕುಮಟಾ ನಗರದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಚಿಂತಾನಾಶೀಲ  ಸಭೆ.

ರಾಣೇಬೆನ್ನೂರು 25: ಉತ್ತರ ಕನ್ನಡ ಜಿಲ್ಲೆ ಕುಮಟಾ ಮಹಾನಗರದಲ್ಲಿ ಬರುವ ಜೋನ್ 2 ಮತ್ತು 3 2023 ರಂದು ಎರಡು ದಿವಸಗಳ ಕಾಲ ಬ್ರಹ್ಮ  ಶ್ರೀ ನಾರಾಯಣ ಗುರು ಶಕ್ತಿಪೀಠ ಹಾಗೂ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಆಶ್ರಯದಲ್ಲಿ ಈಡಿಗ, ಬಿಲ್ಲವಾ ಮತ್ತು ನಾಮಧಾರಿ ಸಮಾಜದ ಪ್ರಮುಖ ಮುಖಂಡರ ಸಮಾಲೋಚನಾ ಸಭೆ ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕೇಂದ್ರದ ಪೀಠಾಧಿಪತಿ ಡಾ . ಪ್ರಣವಾನಂದ ರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.     

ಸಮಾವೇಶ ನಡೆಯುವ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಮಾಜದ ಆಯ್ದ ಪ್ರಮುಖ ಪ್ರತಿನಿಧಿಗಳ ಚಿಂತನಾ ಶೀಲ ಸಮಾವೇಶ ಇದಾಗಿದ್ದು,  ಕ್ಷೇತ್ರ ಸಿಗಂದೂರ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ .ರಾಮಪ್ಪನವರು ಸಮಾವೇಶ ಉದ್ಘಾಟಿಸುವರು. ಶಕ್ತಿಪೀಠದ ಪೀಠಾಧಿಪತಿ ಡಾ : ಪ್ರಣವಾನಂದರಾಮ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ, ವಿಧಾನ ಪರಿಷತ್ ಸದಸ್ಯಬಿ.ಕೆ. ಹರಿಪ್ರಸಾದ್,ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಿರಸಿ ಶಾಸಕ, ಭೀಮಣ್ಣ ನಾಯಕ್, ಕಲಬುರ್ಗಾ  ಆಕಾಶವಾಣಿ ಕಾರ್ಯಕ್ರಮ ನಿರ್ಮಾಣಾಧಿಕಾರಿ ಡಾ . ಸದಾನಂದ ಪೇರ್ಲ, ಭಟ್ಕಳ್ ಮಾಜಿ ಶಾಸಕ, ಕೆ. ಜಿ. ನಾಯ್ಕ್, ಮಾಜಿ ಮಂತ್ರಿ ಆರ್.ಎನ್.ನಾಯ್ಕ್, ಮುಲ್ಕಿ ಶಾಸಕ, ಉಮಾನಾಥ್  ಕೋಟ್ಯಾನ್, ಸಾಗರ ಶಾಸಕ, ಬೇಳೂರು ಗೋಪಾಲಕೃಷ್ಣ, ನಿವೃತ್ತ  ಪ್ರಾಧ್ಯಾಪಕ ಪ್ರೊ, ನಾಗೇಶ್ ನಾಯ್ಕ್ ಯಲ್ಲಾಪುರ್, ಉದ್ಯಮಿ ಸೋರಜ್ ಸೋನಿ ನಾಯ್ಕ್,ಈಡಿಗ ರಾಷ್ಟ್ರೀಯ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ  ಡಾ ಬಿ. ಹೆಚ್. ಮಂಜೇಗೌಡ, ನಾರಾಯಣ ಗುರು ಶಕ್ತಿ ಪೀಠದ ಕಾರ್ಯದರ್ಶಿ, ವೆಂಕಟೇಶ್ ಗುಂಡಾನೂರ್,ಈಡಿಗ ಮಹಾಮಂಡಳಿ ರಾಜ್ಯಾಧ್ಯಕ್ಷ ಸಂತೋಷಕುಮಾರ್ ಜಿ ಎನ್. ಪ್ರಧಾನ ಕಾರ್ಯದರ್ಶಿ,ಎನ್. ಗುರುರಾಜ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳುವರು. ಸಮಾಜದ ಬಾಂಧವರು ನಡೆಯಲಿರುವ ಚಿಂಚನಶೀಲ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಡಾ.ಪ್ರಣವಾನಂದ ರಾಮ ಶ್ರೀಗಳು ಕೋರಿದ್ದಾರ 

ಸುದ್ದಿ ಓದಿ