ಬೈಲಹೊಂಗಲ

ರಾಣಿ ಮಲ್ಲಮ್ಮಳ ಜಯಂತಿ ಉತ್ಸವ: ಭವ್ಯ ಮೆರವಣಿಗೆ

ರಾಣಿ ಮಲ್ಲಮ್ಮಳ ಜಯಂತಿ ಉತ್ಸವ: ಭವ್ಯ ಮೆರವಣಿಗೆ

ಬೈಲಹೊಂಗಲ 19: ನಾಡ ರಕ್ಷಣೆಗಾಗಿ ವಿಶ್ವದ ಮೊದಲ ಮಹಿಳಾ ಸೈನ್ಯ ಕಟ್ಟಿ ಹೋರಾಡಿದ ಹೆಗ್ಗಳಿಕೆಯುಳ್ಳ ವೀರರಾಣಿ ಬೆಳವಡಿ ಮಲ್ಲಮ್ಮಳ ಜಯಂತಿ ಉತ್ಸವವನ್ನು ಶುಕ್ರವಾರ ಅದ್ಧೂರಿಯಿಂದ ಬೆಳವಡಿ ಗ್ರಾಮದಲ್ಲಿ ಆಚರಿಸಲಾಯಿತು. 

ಜಯಂತ್ಯೋತ್ಸವ ನಿಮಿತ್ತ ಮಲ್ಲಮ್ಮನ ಬೆಳವಡಿಯ ಕರವೇ ಕಾರ್ಯಕರ್ತರ ನೇತೃತ್ವದಲ್ಲಿ ಬೆಳವಡಿ ಸಂಸ್ಥಾನದ ರಾಜಗುರು ಮಠ ಹೂಲಿ ಹಿರೇಮಠದಿಂದ ಅಜ್ಜಯ್ಯ ಮಹಾಸ್ವಾಮಿಗಳಿಂದ ಚಾಲನೆಗೊಂಡು  ಸವದತ್ತಿ, ಕರೀಕಟ್ಟಿ ಮಾರ್ಗವಾಗಿ ದೊಡವಾಡ ಗ್ರಾಮಕ್ಕೆ ಆಗಮಿಸಿದ ರಾಣಿ ಮಲ್ಲಮ್ಮಳ ವೀರ ಜ್ಯೋತಿಯನ್ನು  ಕೊಪ್ಪದ ಅಗಸಿಯಲ್ಲಿ ಅದ್ಧೂರಿಯಿಂದ ಸ್ವಾಗತಿಸಲಾಯಿತು.

ಗ್ರಾಮದ ಮಾಜಿ ಯೋಧರಿಂದ ಜ್ಯೋತಿಗೆ ಹೂಮಾಲೆ ಅರ್ಪಿಸಲಾಯಿತು. ಗ್ರಾಮದ ವೀರಭದ್ರೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾಥರ್ಿಗಳು ಮತ್ತು ಶಿಕ್ಷಕರೊಂದಿಗೆ ಗ್ರಾಮಸ್ಥರು ಸೇರಿ ವೀರಜ್ಯೋತಿಯ ಭವ್ಯ ಮೆರವಣಿಗೆ ನಡೆಸಿದರು. ಹಿರೇಮಠದ ದ್ವಾರದ ಬಳಿ ನವಲಗುಂದ ಗವಿಮಠದ ಅಭಿನವ ಬಸವಲಿಂಗ ಮಹಾಸ್ವಾಮಿಗಳು ಜ್ಯೋತಿಗೆ ಮಾಲಾರ್ಪಣೆ ಮಾಡಿ ಗೌರವಿಸಿ ಬುಡರಕಟ್ಟಿಗೆ ಬೀಳ್ಕೊಟ್ಟರು. ನಂತರ ಬುಡರಕಟ್ಟಿ ಮಾರ್ಗವಾಗಿ ಸಿದ್ದಸಮುದ್ರದ ಸಿದ್ಧೇಶ್ವರ ಮಠಕ್ಕೆ ಭೇಟಿ ಕೊಟ್ಟು ಬೆಳವಡಿ ಗ್ರಾಮಕ್ಕೆ ಜ್ಯೋತಿಯನ್ನು ತರಲಾಯಿತು.

ಬೆಳವಡಿ ಗ್ರಾಮದ ಗ್ರಾಮ ಪಂಚಾಯತಿ ಅದ್ಯಕ್ಷರಾದ ರಾಜಶೇಖರಯ್ಯ ಕಾರಿಮನಿ ಬರಮಾಡಿಕೊಂಡು ಹೂಮಾಲೆ ಹಾಕಿ ಮೂತರ್ಿಪೂಜೆ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹುಂಬಿ ಐತಿಹಾಸಿಕ ಬೆಳವಡಿ ಗ್ರಾಮದ ಸಮಗ್ರ ಅಭಿವೃದ್ಧಿ ಕೇವಲ ಭರವಸೆ ಮತ್ತು ಹೇಳಿಕೆಗಳಿಗೆ ಸೀಮಿತವಾಗಿದೆ. ರಾಣಿ ಮಲ್ಲಮ್ಮಳ ವೃತ್ತದ ಅಭಿವೃದ್ಧಿ ಮಂದಗತಿಯಲ್ಲಿ ಸಾಗಿದೆ. ಪ್ರತಿಮೆ ಸ್ಥಾಪನೆಗೆ ಕಳಪೆ ಟೈಲ್ಸ್ ಬಳಸಲಾಗಿದೆ. ಇದು ರಾಣಿ ಮಲ್ಲಮ್ಮಳಿಗೆ ತೋರಿದ ಅಗೌರವ ಆದ್ದರಿಂದ ಈ ಸರಕಾರವಾದರೂ ಎಚ್ಚೆತ್ತು ಶೀಘ್ರ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಬೆಳಗಾವಿ ಸುವರ್ಣ ಸೌಧದ ಎದುರು ಬೆಳವಡಿ ಮಲ್ಲಮ್ಮಳ ಮೂತರ್ಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಪರವಾಗಿ ಸರಕಾರಕ್ಕೆ ಆಗ್ರಹಿಸಿದರು. ನಂತರ ಈಶಪ್ರಭು ಶಿಕ್ಷಣ ಸಂಸ್ಥೆಯ ವಿದ್ಯಾಥರ್ಿಗಳಿಂದ ವಿವಿಧ  ರೂಪಕ, ಹಾಗೂ ವಾದ್ಯಮೇಳ, ಡೊಳ್ಳು, ಮಜಲುಗಳೊಂದಿಗೆ ಮಲ್ಲಮ್ಮನ ಜ್ಯೋತಿಯನ್ನು ಗಾಮದಲ್ಲಿ ಮೆರವಣಿಗೆ ಮಾಡಲಾಯಿತು. 

ಸಾಯಂಕಾಲ ಈಶಪ್ರಭು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರವೇ ಕಾರ್ಯಕರ್ತರ ನೇತೃತ್ವದಲಿ ವಿಜೃಂಭನೆಯಿಂದ ಜರುಗಿದವು.

ಗ್ರಾಪಂ ಸದಸ್ಯರಾದ ವಿಶ್ವನಾಥ ಕರೀಕಟ್ಟಿ, ಬಿ.ಜಿ.ದೇಗಾವಿ, ಈರಣ್ಣ ತುರಾಯಿ ಕರವೇ ಕಾರ್ಯಕರ್ತರಾದ ಬಸವರಾಜ ಉಡಿಕೇರಿ, ಮಹಾಂತೇಶ ಕರೀಕಟ್ಟಿ, ಸಲೀಂ ಹುಜರತಿ, ಮಹಾಂತೇಶ ಕೊರವಿನಕೊಪ್ಪ, ಪಿಂಟು ಗುಡ್ಡದಮಠ, ರಮ್ಜಾನ ನದಾಫ, ಪ್ರದೀಪ ಬಿಸರೊಳ್ಳಿ, ವಿಠ್ಠಲ ರೋಡಸಿ, ಫಕ್ಕೀರ ವಡ್ಡರ, ಫಕ್ಕೀರ ಸಾವಂತ್ರಿ, ಪ್ರಮುಖರಾದ ವಿ.ಎಸ್.ಬಳಿಗಾರ, ರಾಚಯ್ಯ ರೊಟ್ಟಯ್ಯನವರಮಠ, ಅಶೋಕ ಮಾರಿಹಾಳ, ಬಸುರಾಜ ನರೇಗಲ್ಲ, ಆನಂದ ಮುಪ್ಪಯ್ಯನವರ, ಎಮ್.ಎಮ್.ಕಾಡೇಶನವರ, ಡಾ.ಡಿ.ವೈ.ಗರಗದ, ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಈಶ್ವರ ಪೂಜೇರ, ಎಮ್.ಪಿ.ಉಪ್ಪಿನ, ಮಡ್ಡೆಪ್ಪ ಹುಂಬಿ, ಎನ್.ಎಮ್.ಕರೀಕಟ್ಟಿ. ಎಲ್ಲ ಸಂಘಸಂಸ್ಥೆಗಳು, ಗಣ್ಯರು, ಹಿರಿಯರು ಪಾಲ್ಗೊಂಡಿದ್ದರು 

ಸುದ್ದಿ ಓದಿ