ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ರಮೇಶ ಭೂಸನೂರ ಚಾಲನೆ
ಇಂಡಿ 23: ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಸದಸತ್ವ ಅಭಿಯಾನಕ್ಕೆ ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕರಾದ ರಮೇಶ ಭೂಸನೂರ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿದೆ.ನಮ್ಮ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿ ಭೂತನಲ್ಲಿ ಸುಮಾರು ಮೂರುನೂರು ಸದಸ್ಯರನ್ನು ಮಾಡುವ ಮುಖಾಂತರ ಸಿಂದಗಿ ಮತಕ್ಷೇತ್ರದಿಂದ ಐವತ್ತು ಸಾವಿರ ಸದಸ್ಯರನ್ನು ಮಾಡಬೇಕು ಎಂಬ ಗುರಿ ಹೊಂದಲಾಗಿದೆ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಜಿಲ್ಲೆಯ ಬಿಜೆಪಿ ವಕ್ತಾರರು ಹಾಗೂ ತಾಂಬಾ ಜಿಲ್ಲಾ ಪಂಚಾಯತ ಸದಸ್ಯತ್ವ ಅಭಿಯಾನ ಉಸ್ತುವಾರಿಗಳು ಡಾ.ಸುರೇಶ ಗೌಡ ಬಿರಾದಾರ ಮಾತನಾಡಿ ಪ್ರತಿಯೊಂದು ಭೂತದಲ್ಲಿ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಸಕ್ರಿಯರಾಗಿ ಸದಸತ್ವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಿಂದಗಿ ತಾಲ್ಲೂಕು ಸದಸ್ಯತ್ವ ಅಭಿಯಾನ ಸಂಚಾಲಕರು ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರು ಶಿವರಾಜ್ ಕೆಂಗನಾಳ ಪ್ರಸ್ತಾವಿಕ ಮಾತನಾಡಿ ಇಡೀ ವಿಶ್ವದಲ್ಲಿಯೇ ನಮ್ಮ ಬಿಜೆಪಿ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮೆಲ್ಲ ಕಾರ್ಯಕರ್ತರು ಬಿಜೆಪಿ ಪಕ್ಷದ ಆಧಾರ ಸ್ಥಂಭವಾಗಿ ಮೋದೀಜೀ ವಿಕಸಿತ ಭಾರತ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಅಭಿಯಾನದಲ್ಲಿ ಪಾಲ್ಗೊಂಡು ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಜಿ ಅವರ ವಿಕಸಿತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕಾರಣಿ ಭೂತರಾಗೋಣ ಎಂದು ಹೇಳಿದರು.ಗ್ರಾಮದ ಹಿರಿಯ ಮುಖಂಡ ವಾಯ್ ಜಿ ಗೊರನಾಳ, ಶಂಕರ ಯಳಕೋಟಿ, ಭೀಮಾಶಂಕರ ಗೊಂಗಿ, ರಾಜು ಗಂಗನಳ್ಳಿ, ಬಸವರಾಜ ಸರಸಂಬಿ, ಸಿದ್ದಪ್ಪ ತೋರವಿ, ಗುರುರಾಜ್ ಚಿಂಚೋಳಿ, ಶ್ರೀಶೈಲ್ ನಿಂಗಮನಿ ಹಾಗೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.