ಅಥಣಿ

ರಾಮಾಯಣ, ಮಹಾಭಾರತ ಭಾರತದ ಸಂಸ್ಕೃತಿಯ ಪ್ರತೀಕ

ರಾಮಾಯಣ, ಮಹಾಭಾರತ ಭಾರತದ ಸಂಸ್ಕೃತಿಯ ಪ್ರತೀಕ

ಶಾಸಕ ಶ್ರೀಮಂತ ಪಾಟೀಲ ಅಭಿಮತ: ಬೇಡರಹಟ್ಟಿಯಲ್ಲಿ ವಾಲ್ಕೀಕಿ ಜಯಂತಿ ಕಾರ್ಯಕ್ರಮ

ವೆಂಕಟೇಶ ದೇಶಪಾಂಡೆ

ಅಥಣಿ 12: ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ಕೇವಲ ಭಾರತಕ್ಕೆ ಮಾತ್ರ ಸೀಮೀತವಾಗದೇ ವಿಶ್ವದೆತ್ತರಕ್ಕೆ ತಲುಪಿದೆ ಎಂದು ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹೇಳಿದರು. 

ಅವರು ಬೇಡರಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಕೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. 

    ರಾಮಾಯಣ, ಮಹಾಭಾರತ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಈ ಎರಡೂ ಮಹಾಕಾವ್ಯಗಳನ್ನು ಭಾರತ ವಿಶ್ವಕ್ಕೆ ಕೊಡುಗೆ ನೀಡಿದೆ. ಈ ಎರಡೂ ಮಹಾ ಕಾವ್ಯಗಳು ಹಿಂದಿಗಿಂತಲೂ ಸದ್ಯದ ವಿಷಮ ಸ್ಥಿತಿಯಲ್ಲಿ ಪ್ರಸ್ತುತವಾಗಿದೆ ಎಂದರು. ಮಹಷರ್ಿ ವಾಲ್ಮೀಕಿ ರಾಮಾಯಣ ಮಹಾ ಕಾವ್ಯದ ಮೂಲಕ ತ್ಯಾಗ, ಸತ್ಯ, ದಯೆ, ದಾನದ ಕಲ್ಪನೆಯನ್ನು ತೋರಿಸಿಕೊಟ್ಟಿದ್ದು, ಮಹಷರ್ಿ ವಾಲ್ಮೀಕಿ ಜೀವನ ಅವರ ಸತ್ಯದ ದಾರಿ ನಮಗೆಲ್ಲ ದಾರಿ ದೀಪ ಎಂದರು. 

   ಕಾಗವಾಡ ಮತಕ್ಷೇತ್ರದ ಬರಗಾಲ ಪಿಡಿತ ಪ್ರದೇಶಕ್ಕೆ ನೀರಾವರಿ ಒದಗಿಸಲಿರುವ ಖಿಳೇಗಾಂವ  ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಇನ್ನೆರಡೇ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಹ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದರು. ಈ ಯೋಜನೆ ತಲುಪದ ಚಮಕೇರಿ, ಬೇಡರಹಟ್ಟಿ, ಬಳ್ಳಿಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಬಿಸುವ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದ ಅವರು ಬೇಡರಹಟ್ಟಿ ಗ್ರಾಮದಲ್ಲಿರುವ ಸುಮಾರು 275 ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಜಲಜೀವನ್ ಯೋಜನೆಗೆ ಚಾಲನೆ ನೀಡುತ್ತಿರುವೆ ಎಂದರು.  

    ಸಾನಿಧ್ಯ ವಹಿಸಿ ಮಾತನಾಡಿದ ಕೌಲಗುಡ್ಡದ ಅಮರೇಶ್ವರ ಮಹಾರಾಜರು, ಕಾಗವಾಡ ಮತಕ್ಷೇತ್ರಕ್ಕೆ ನೀರಾವರಿ ಒದಗಿಸಿದ ಆಧುನಿಕ ಭಗೀರಥ ಶಾಸಕ ಶ್ರೀಮಂತ ಪಾಟೀಲರು ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಸರಕಾರದ ಯೋಜನೆಗಳು ತಲಪುವಂತೆ ಮಾಡಿದ್ದಾರೆ ಎಂದ ಅವರು ತಮ್ಮ ಕ್ಷೇತ್ರದ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ, ಮಹಿಳಿಯರಿಗೆ, ವಿದ್ಯಾರ್ಥಿಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು. 

      ರಾಜ್ಯ ಸರಕಾರ ಮಹರ್ಷಿ  ವಾಲ್ಮೀಕಿ ಸಮಾಜಕ್ಕೆ ಇದೇ ಮೊದಲ ಬಾರಿಗೆ ಮೀಸಲಾತಿಯನ್ನು ಶೇ.3 ರಿಂದ 7 ಕ್ಕೆ ಹೆಚ್ಚಿಸಿದ್ದು, ಈ ಮೀಸಲಾತಿಯ ಸೌಲಭ್ಯದ ಸದುಪಯೋಗ ಮಾಡಿಕೊಂಡು ಶೈಕ್ಷಣಿಕ,ಆರ್ಥಿಕ , ಸಮಾಜಿಕವಾಗಿ ಬಲಗೊಳ್ಳಬೇಕು ಎಂದು ಕರೆ ನೀಡಿದ ಅವರು ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಅವರು ವಿಶ್ವಕ್ಕೆ ಮಾರ್ಗದರ್ಶಕರು ಎಂದರು. 

    ನಾನಾಸಾಹೇಬ ಅವತಾಡೆ, ನಿಂಗಪ್ಪ ಖೋಕಲೆ, ಬಾಬು ಅಲಕನೂರ, ಮಹಾದೇವ ಬಿಸಲನಾಯಿಕ, ಸಿದರಾಯ ನಾಯಿಕ, ಅಶೋಕ ಯಲ್ಲಡಗಿ, ಭೀಮಾಶಂಕರ ನಾಯಿಕ, ಅಪ್ಪಣ್ಣ ಮುಜಗೋಣಿ, ರಾಜು ಚವ್ಹಾಣ, ಬಾಬು ಅಲಗೂರ, ಮಲ್ಲಿಕಾರ್ಜುನ  ಅಂದಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಶಾಸಕ ಶ್ರೀಮಂತ ಪಾಟೀಲರು ಜಲಜೀವನ ಯೋಜನೆಗೆ ಚಾಲನೆ ನೀಡಿದರು 

ಸುದ್ದಿ ಓದಿ