ಎಲ್ಲರನ್ನು ಒಂದು ಗೂಡಿಸುವದೇ ರಂಜಾನ ಹಬ್ಬದ ಆಶಯ: ಕಾಸ್ಮಿ
ಇಂಡಿ: ಪ್ರೀತಿ-ಸೌಹಾರ್ದತೆಯಿಂದ ಬದುಕಿ ಬಾಳಬೇಕು ಎಂಬ ಸಂದೇಶ ನೀಡುವುದು ರಂಜಾನ್ ಹಬ್ಬದ ಪ್ರಮುಖ ಉದ್ದೇಶವಾಗಿದೆ. ಸಮಾಜದಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಿ ಬಾಳಬೇಕು. ಸಹೋದರತೆಯ ಭಾವನೆ, ಆತ್ಮ ವಿಶ್ವಾಸದ ಸಾಧನ, ಎಲ್ಲರನ್ನು ಒಂದು ಗೂಡಿಸುವದೇ ರಂಜಾನ ಹಬ್ಬದ ಆಶಯ ಎಂದು ಮೌಲಾನಾ ಶಾಕೀರ ಹುಸೇನ ಕಾಸ್ಮಿ ಹೇಳಿದರು.
ಮಂಗಳವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್್ ಪ್ರಾರ್ಥನೆ ನಿಮಿತ್ಯ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಕೊರೊನಾ ನಿಮಿತ್ಯ ಹಬ್ಬ ಆಚರಣೆಯಲ್ಲಿ ತೊಂದರೆಯಾಯಿತು. ಈ ವರ್ಷ ಕೊರೊನಾ ನಿರ್ಮೂಲನೆಗೆ ಎಲ್ಲರೂ ಪ್ರಾರ್ಥಿಸೋಣ ಎಂದರು.
ಮೌಲಾನಾ ಅಬ್ದುಲ್ ರೆಹಮಾನ ನಮಾಜ ಬೋಧಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ, ಬಿಜೆಪಿ ರೈತಮೋರ್ಚಾ ಜಿಲ್ಲಾಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಹಂಜಗಿ, ಫಯಾಜ ಬಾಗವಾನ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಮಹಿಬೂಬ ಅರಬ, ಸತ್ತಾರ ಬಾಗವಾನ, ಅಂಜುಮನ್ ಅಧ್ಯಕ್ಷ ಅಪಜಲ್ ಹವಾಲದಾರ, ಮುಸ್ತಾಕ ಇಂಡಿಕರ, ಮಜಿದ ಸೌದಾಗರ, ಜಹಾಂಗೀರ ಸೌದಾಗರ, ಅಸ್ಲಂ ಕಡಣಿ, ಶಬ್ಬೀರ ಖಾಜಿ, ಅಂಜುಮನ ಸಂಸ್ಥೆಯ ಜಾವೀದ ಮೋಮಿನ, ಅಖೀಲ ಹವಾಲದಾರ ಅಯೂಬ ನಾಟಿಕಾರ, ಮುನ್ನಾ ಡಾಂಗೆ, ಖಾದಿರ ಡಾಂಗೆ ಮತ್ತಿತರಿದ್ದರು.