ಬೈಲಹೊಂಗಲ

ಸಂಭ್ರಮದಿಂದ ರಕ್ಷಾ ಬಂಧನ ಆಚರಣೆ

ಸಂಭ್ರಮದಿಂದ ರಕ್ಷಾ ಬಂಧನ ಆಚರಣೆ

ಲೋಕದರ್ಶನ ವರದಿ

 ಬೈಲಹೊಂಗಲ 01: ಸಹೋದರತ್ವ ಸಾರ ಸಾರುವ ರಕ್ಷಾ ಬಂಧನ ಹಬ್ಬವನ್ನು ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

     ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಹಿಳಾ ಸಿಬ್ಬಂದಿಗಳಿಂದ ಅಗ್ನಿಶಾಮಕದಳ ಹಾಗೂ ಪೊಲೀಸ ಠಾಣೆಯ ಸಿಬ್ಬಂದಿಗಳಿಗೆ ತಿಲಕ ಇಟ್ಟು, ಆರತಿ ಬೆಳಗಿ, ಸಿಹಿ ತಿನ್ನಿಸಿ ರಾಖಿ ಕಟ್ಟಿದರು.

   ಪಟ್ಟಣದ ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾಥರ್ಿಗಳು ರಾಖಿ ಕಟ್ಟಿ ಸಹೋದರತ್ವ ಭಾಂದವ್ಯ ಮೆರೆದರು. ಸಹೋದರರು ಸಹೋದರಯರಿಂದ ರಾಖಿ ಕಟ್ಟಸಿಕೊಂಡು ಸಹೋದರತ್ವದ ಪ್ರೀತಿ ತೋರಿದರು. ಸಹೋದರಿಯರಿಗೆ ಪ್ರೀತಿಯ ಉಡುಗೆ ನೀಡಿದರು 

ಸುದ್ದಿ ಓದಿ