ರಾಜರಾಜೇಶ್ವರಿ ದೇವಿ ಪಲ್ಲಕ್ಕಿ ಉತ್ಸವ
ಲೋಕದರ್ಶನ ವರದಿ
ಯರಗಟ್ಟಿ 06: ಪಟ್ಟಣದ ರಾಜರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರ ಕುಂಭಮೇಳ, ಆರುತಿ, ಕರಡಿ ಮಜಲು, ಸನಾಯಿ ವಾದನ ಹೀಗೆ ವಿವಿಧ ವಾಧ್ಯಮೇಳಗಳೊಂದಿಗೆ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ವೃತ್ತ, ಎಮ್.ಜಿ.ರಸ್ತೆ, ಒಂಟಿ ಗಲ್ಲಿ, ಕರಿಗೊಣ್ಣವರ ಓಣಿ, ಕೃಷ್ಣಾ ನಗರ, ಮಿಕಲಿ ಓಣಿ, ಮಹಾಂತೇಶ ನಗರ ಮೂಲಕ ರಾಜರಾಜೇಶ್ವರಿ ದೇವಿ ಪಲ್ಲಕ್ಕಿ ಉತ್ಸವ ಅದ್ಧೂರಯಾಗಿ ಜರುಗಿತು. ಮಹಾಪ್ರಸಾದ ಹಮ್ಮಿಕೊಳ್ಳಲಾಗಿತ್ತು.
ಆಶ್ರಮದ ಪೀಠಾಧಿಪತಿ ಗಣಪತಿ ಮಹಾರಾಜರು, ಕಟಕೋಳ ಸಿದ್ರಾಯಜ್ಜನವರು, ಸೋಮಲಿಂಗಯ್ಯ ವಿರಕ್ತಮಠ, ವಿದ್ಯಾರತ್ನ ಖೇಮಲಾಪೂರ, ಪಿ.ಎಚ್.ಪಾಟೀಲ, ರಾಜೇಂದ್ರಗೌಡ ಪಾಟೀಲ, ವಿಠ್ಠಲಗೌಡ ದೇವರಡ್ಡಿ, ಶಿವಪ್ಪ ಆಲದಕಟ್ಟಿ, ಬಾಸ್ಕರ ಹಿರೇಮೇತ್ರಿ, ಶಿವಾನಂದ ಮಿಕಲಿ, ಚಿದಂಬರ ಕದಮ್, ವಿಜಯ ಮರಡಿ, ವ್ಹಿ.ಜಿ.ಹೊಸಮಠ, ಅರ್ಜುನ ಕಂಬಾರ, ಅಶೋಕ ಬಡಿಗೇರ, ರಾಜೇಂದ್ರ ಶೆಟ್ಟಿ, ಮಲ್ಲಪ್ಪ ಪಾಟೀಲ ಮುಂತಾದವರಿದ್ದರು.