ಬೆಳಗಾವಿ

ಭಗಳಾಂಬಾ ದೇವಿ ಮಂದಿರದ ದಶಮಾನೋತ್ಸವ ಹಾಗೂ ಚಿದಾನಂದ ಶ್ರೀಗಳ ಷಷ್ಟಬ್ದಿ ಕಾರ್ಯಕ್ರಮದ ಪೂರ್ವಭಾವಿ ಸಭೆ

ಭಗಳಾಂಬಾ ದೇವಿ ಮಂದಿರದ ದಶಮಾನೋತ್ಸವ ಹಾಗೂ ಚಿದಾನಂದ ಶ್ರೀಗಳ ಷಷ್ಟಬ್ದಿ  ಕಾರ್ಯಕ್ರಮದ ಪೂರ್ವಭಾವಿ ಸಭೆ
Preliminary meeting for the decennial celebrations of the Bhagalamba Devi Temple and the 60th birthd

             ನೇಸರಗಿ 24  - ಮಲ್ಲಾಪೂರ ಗಾಳೇಶ್ವರ ಮಠದಲ್ಲಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಅತೀ ವಿಜೃಂಭಣೆಯಿಂದ ಜರುಗುವ ಜಾತ್ರೆಯ ಅಂಗವಾಗಿ  ಬರುವ 2027 ರ  ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮಠದ ಆವರಣದಲ್ಲಿ ಶ್ರೀ ಭಗಳಾಂಬಾ ಮಂದಿರ ನಿರ್ಮಾಣ ಆಗಿ 10 ವರ್ಷ ಕಳೆದ ಪ್ರಯುಕ್ತ ದಶಮಾನೋತ್ಸವ ಸಮಾರಂಭ ಮತ್ತು ಮಠದ ಪೂಜ್ಯ ಶ್ರೀ ಚಿದಾನಂದ ಶ್ರೀಗಳ ಷಷ್ಟಬ್ದಿ ಸಮಾರಂಭದ ಕುರಿತು  ಶ್ರೀಗಳ ಹಾಗೂ  ಈ ಭಾಗದ ಎಲ್ಲ ಭಕ್ತರ ಸಹಯೋಗದಲ್ಲಿ ಜಾತ್ರೆ ಮತ್ತು ವಿಶೇಷ ಕಾರ್ಯಕ್ರಮ ಆಯೋಜನೆ ಕುರಿತು ಮಠದ ಸಭಾ ಭವನದಲ್ಲಿ ಪೂರ್ವಬಾವಿ ಸಭೆಯು ಮಂಗಳವಾರದಂದು ಜರುಗಿತು.   

              ಸಾನಿಧ್ಯ ವಹಿಸಿದ್ದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಭಗಳಾಂಬಾ ದೇವಿಯ ಮಂದಿರ ನಿರ್ಮಾಣವಾಗಿ  10 ವರ್ಷ ಕಳೆದ ಪ್ರಯುಕ್ತ ದಶಮಾನೋತ್ಸವ  ವಿಶೇಷ  ಕಾರ್ಯಕ್ರಮ ಆಯೋಜಿಸಲು ನಾವು, ಹಿರಿಯ ಶ್ರೀಗಳು, ಮಠದ ಭಕ್ತ ಸಮೂಹ ತೀರ್ಮಾನ ಮಾಡಿದ್ದು ಈ ಕಾರ್ಯಕ್ರಮವನ್ನು ಜಾತ್ರಾ ಸಮಯದಲ್ಲಿ ನೆರವೇರಿಸಲು ತೀರ್ಮಾನ ಮಾಡಿದ್ದು ಈ ಕಾರ್ಯಕ್ಕೆ ಭಕ್ತ ಸಮೂಹ ತನು ಮನದಿಂದ ಪ್ರೋತ್ಸಾಹ ನೀಡಬೇಕು ಎಂದರು.       

             ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹುಣಶ್ಯಾಳ ಪಿ ಜಿ ಯ ಕೈವಲ್ಯಾಶ್ರಮದ  ನಿಜಗುಣ ದೇವರು ಹಾಗೂ ತೊಂಡಿಕಟ್ಟಿಯ  ಅಭಿನವ ವೆಂಕಟೇಶ್  ಮಹಾರಾಜರು ಆಶೀರ್ವಚನ ನೀಡಿ ಮಾತನಾಡಿ ಕೇವಲ ಸಣ್ಣ ದೇವಸ್ಥಾನ ಇದ್ದ ಈ ಮಠವನ್ನು 38 ವರ್ಷಗಳ ಹಿಂದೆ ಮಠಕ್ಕೆ ಆಗಮಿಸಿ ಧಾರ್ಮಿಕ, ಆದ್ಯಾತ್ಮಿಕ, ಶೈಕ್ಷಣಿಕ, ಮಠದ ಪರಂಪರೆ, ಹಲವಾರು ದೇವಸ್ಥಾನ, ಶಾಲಾ ಕಟ್ಟಡ, ವಸತಿ ನಿಲಯ, ಸಭಾ ಭವನ, ಕಲ್ಯಾಣ ಮಂಟಪ, ಅದ್ದೂರಿ ಜಾತ್ರೆ, ಭಕ್ತರ ಕಾರ್ಯಗಳಿಗೆ ಸ್ಪಂದನೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ                      ಈ ಭಾಗದ ಭಕ್ತರ ಕಾಮದೇನು ಶ್ರೀ ಗಾಳೇಶ್ವರ ಮಠದ ಗಣನೀಯ ಬೆಳವಣಿಗೆಗೆ ಶ್ರೀ ಚಿದಾನಂದ ಮಹಾಸ್ವಾಮಿಗಳು ಪಾತ್ರ ಬಹಳ ಇದ್ದು ಬರುವ ಜಾತ್ರೆಯಲ್ಲಿ ಅವರ ಷಷ್ಟಬ್ದಿ ಕಾರ್ಯಕ್ರಮ ಆಯೋಜನೆ ಮಾಡಲು ಭಕ್ತ ಸಮೂಹ ತೀರ್ಮಾನ ಕೈಗೊಂಡಿದ್ದು ಅವರು ಮಾಡಿದ ಸತ್ಕಾರ್ಯಕ್ಕೆ ಮನ್ನಣೆ ನೀಡುವ ಉದ್ದೇಶ ಆಗಿದೆ ಎಂದರು.  ಶಾಲೆಯ ಪ್ರಾಂಶುಪಾಲರಾದ ಶರಣು ಮಾದಾಪೂರಮಠ ಪ್ರಸ್ತಾವಿಕವಾಗಿ ಮಠದ ನಡೆದು ಬಂದ ಹಾದಿಯನ್ನು ವಿವರಿಸಿದರು.  

ಸುದ್ದಿ ಓದಿ