ಬೆಳಗಾವಿ

ಪಟ್ಟಣದ ಶಿವಾಲಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ

ಪಟ್ಟಣದ ಶಿವಾಲಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ

ಲೋಕದರ್ಶನ ವರದಿ 

         ಹಾರೂಗೇರಿ  24 : ಬಸವ ಮಂಟಪ ಕೃತಿ ರಚಿಸಿದ ರವಿ ಹಂಜ್‌ಗಿಮಠ ಅವಹೇಳನಕಾರಿ ಲೇಖನ ಬರೆದು, ವಿಶ್ವಮಾನ್ಯ ಬಸವಣ್ಣನವರನ್ನು ತೇಜೋವಧೆ ಮಾಡಿರುವುದು ಖಂಡನೀಯ. ಲೇಖಕನನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಆಗ್ರಹಿಸಿದರು. 

      ಪಟ್ಟಣದ ಶಿವಾಲಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಆಶ್ರಯದಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದವರು ಭಕ್ತಿ ಭಂಡಾರಿ ಬಸವಣ್ಣನವರು ಇಂತಹ ವಿಶ್ವಜ್ಯೋತಿ ಬಸವಣ್ಣನವರನ್ನು ರವಿ ಹಂಜ್ ಎಂಬ ಲೇಖಕ ತಮ್ಮ ಬಸವ ಮಂಟಪ ಕೃತಿಯಲ್ಲಿ ಹಾಗೂ ಸಂದರ್ಶನದ ಮೂಲಕ ಬಸವಣ್ಣನವರನ್ನು ಕೊಲೆಗಡುಕ ಎಂದು ಉಲ್ಲೇಖಿಸಿರುವುದು ದೊಡ್ಡ ಅಪರಾಧವಾಗಿದೆ. ಇದನ್ನು ಜಾಗತಿಕ ಲಿಂಗಾಯತ ಮಹಾಸಭೆ ಕಟುವಾಗಿ ಖಂಡಿಸುತ್ತದೆ ಎಂದರು. 

           ಜಿಲ್ಲಾ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ಜನತಾ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾದ ರಾಜಶೇಖರ ಪಾಟೀಲರು ಮಾತನಾಡುತ್ತ ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿ, ಕೀಳು ಅಭಿರುಚಿಯ ಕೃತಿ ರಚಿಸಿದ್ದು ಖಂಡನೀಯ. ಬಂಧನವಾದರಚ್ಟೇ ಸಾಲದು, ಲೇಖಕರಿಗೆ ತಕ್ಕ ಶಿಕ್ಷೆಯಾಗಬೇಕು. ಆ ಲೇಖಕನ ಎಲ್ಲಾ ಪುಸ್ತಕಗಳನ್ನು ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಹೇಳಿದರು. 

       ಸಮಾಜದ ಗಣ್ಯರಾದ ಬಸನಗೌಡ ಆಸಂಗಿ, ಕೆಂಪಣ್ಣ ಸದಲಗಿ, ಬಸವರಾಜ ಖೋತ, ಪುರಸಭೆ ಸದಸ್ಯ ವಿನಾಯಕ ಮುಡಸಿ, ಕಾಂತು ಬಾಡಗಿ, ಲಿಂಗಾಯತ ಕಾಯಕ ಸಮಿತಿ ಅಧ್ಯಕ್ಷ ಪರಗೌಡ ಉಮರಾಣಿ, ವಿಶ್ವನಾಥ ಅರಬಳ್ಳಿ, ಮಲ್ಲಿಕಾರ್ಜುನ ಮಠಪತಿ, ಅಪ್ಪಾಸಾಬ ಮಾಲಿಂಗಪೂರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ