ಬೆಳಗಾವಿ

ನೇಸರಗಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ನೇಸರಗಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

             ನೇಸರಗಿ 24: ಮಂಗಳವಾರ ದಿನಾಂಕ 24-11-2026 ರಂದು ಕುವೆಂಪು ಶಾಲೆ ನೇಸರಗಿ ಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮಲ್ಲಾಪೂರ - ನೇಸರಗಿ ಶ್ರೀ ಗಾಳೇಶ್ವರ ಮಠದ  ಶ್ರೀ ಚಿದಾನಂದ ಮಹಾಸ್ವಾಮಿಗಳು  ಆಗಮಿಸಿ ಆಶೀರ್ವಚನ ನೀಡಿದರು.   ಮುಖಂಡ  ಎಂ ವಾಯ್  ಸೋಮಣ್ಣವರ ಇವರು ವಿಜೇತ ಮಕ್ಕಳಿಗೆ ಬಹುಮಾನ ದೇಣಿಗೆ ನೀಡಿದರು. ಅಕ್ಷರ ದಾಸೋಹ ಅಧಿಕಾರಿಗಳಾದ  ಶ್ರೀಮತಿ  ಕೂಡಒಕ್ಕಲಿಗ ರವರು ಪ್ರಸ್ತಾವಿಕವಾಗಿ ಮಾತನಾಡಿದರು             

             ಎಸ್ ಡಿ ಎಂ ಸಿ  ಕಮೀಟಿ ಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಿ ಆರ್ ಪಿ  ಎಸ್ ಎಸ್ ಪಾಟೀಲ ಕಾರ್ಯಕ್ರಮದ ರುಪುರೇಷಗಳನ್ನು ವಿವರಿಸಿದರು, ಫಾದರ್ ಹ್ಯಾರಿ ವಿಕ್ಟರ್ ಡಿಗ್ರೋಸ್, ಶ್ರೀ ಮತಿ ಐ ಎಮ್ ಬುಡರಕಟ್ಟಿ ಗುರುಮಾತೆಯರು ನಿರೂಪಿಸಿದರು.ಹ್ಯಾರಿ ವಿಕ್ಟರ್ ಡಿಕ್ರೋಸ್, ನಿಂಗಪ್ಪ ತಳವಾರ, ದೇಮಣ್ಣ ಗುಜನಟ್ಟಿ, ಪ್ರಕಾಶ ತೋಟಗಿ,ವಿಷ್ಣು ಸೋಮಣ್ಣವರ,ರಾಜು ಚೋಭಾರಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ