ಇಂದಿನಿಂದ ರಾಜರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಯರಗಟ್ಟಿ 05: ಪಟ್ಟಣದ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವ, 13ನೇ ವರ್ಷದ ವೇದಾಂತ ಪರಿಷತ್, ಗಣಪತಿ ಮಹಾರಾಜರ 61ನೇ ಜಯಂತೋತ್ಸವ ಹಾಗೂ ದೇವಿಯ ರಥೋತ್ಸವ ಮೇ 6 ಮತ್ತು 7ರಂದು ಜರಗುವುದು.
ಮೇ.6 ರಂದು ಬೆಳಿಗ್ಗೆ 5ಕ್ಕೆ ದೇವಿಗೆ ಮಹಾ ಅಭಿಷೇಕ, ಅಲಂಕಾರ ಪೂಜೆ ನೆರವೇರುವುದು, ಮುಂಜಾನೆ 8ಕ್ಕೆ ಕಡಕೋಳ ಸಿದ್ರಾಯಜ್ಜನವರಿಂದ ಧರ್ಮ ಧ್ವಜಾರೋಹಣ ನೆರವೇರುವುದು, ಕುಂಭೋತ್ಸವ, ದೇವಿ ಪಲ್ಲಕ್ಕಿ ಉತ್ಸವ, ನಾವಲಗಿ ಗ್ರಾಮದ ಜೈ ಹನುಮಾನ ಕರಡಿ ಸಂಬಾಳ ಶಹನಾಯಿ ಮಜಲು ಹಾಗೂ ಸಕಲ ವಾಧ್ಯಗಳೊಂದಿಗೆ ಪುರ ಪ್ರವೇಶ, ಮದ್ಯಾಹ್ನ ಮಹಾಪ್ರಸಾದ ಜರಗುವುದು. ಸಂಜೆ4ಕ್ಕೆ ಗಾನಗಾರುಡಿಗ ಮಲ್ಲನಗೌಡ ಶಿವಲಿಂಗಪ್ಪಗೋಳ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜಗುವುದು. ಸಂಜೆ 7ಕ್ಕೆ ಸಕಲ ಮಹಾತ್ಮರ ಸ್ವಾಗತ, ವೇದಾಂತ ವೇದಿಕೆ ಉದ್ಘಾಟನೆ ಹಾಗೂ ಮಹಾತ್ಮರಿಂದ ತತ್ವ ಚಿಂತನೆ ಕಾರ್ಯಕ್ರಮ, ಗಣಪತಿ ಮಹಾರಾಜರ 61ನೇ ಹುಟ್ಟುಹಬ್ಬ ಮತ್ತು ಕೀರೀಟ ಧಾರಣೆ ನೆರವೇರುವುದು ಇಂಚಲ ಶಿವಾನಂದ ಭಾರತಿ ಶ್ರೀಗಳು, ಮುರಗೋಡ ನೀಲಕಂಠ ಶ್ರೀಗಳು, ಚಿಕ್ಕಮುನವಳ್ಳಿ ವಿಧ್ಯಾನಂದ ಭಾರತಿ ಶ್ರೀಗಳು, ಹುಬ್ಬಳ್ಳಿ ರಾಮಾನಂದ ಭಾರತಿ ಶ್ರೀಗಳು, ಸವಟಗಿ ನಿಂಗಯ್ಯ ಹಿರೇಮಠ ಶ್ರೀಗಳು, ಹಡಗಿನಾಳ ಮಲ್ಲೇಶ ಶರಣರು ಪಾಲ್ಗೊಳ್ಳುವರು. ಮೇ.7 ರಂದು ಬೆಳಿಗ್ಗೆ ದೇವಿಗೆ 108 ಲೀಟರ್ ಹಾಲಿನ ಅಭೀಷೇಕ, ಅಲಂಕಾರ ಮಹಾಪೂಜೆ ಹಾಗೂ ನೂತನ ಬೆಳ್ಳೆ ಪ್ರಭಾವಳಿ ಧಾರಣೆ, ಮುಂಜಾನೆ 9ಕ್ಕೆ ಮಹಾತ್ಮರಿಂದ ವೇದಾಂತ ವೇದಿಕೆ ಬಾಗಲಕೋಟ ಪರಮರಾಮಾರೂಡ ಶ್ರೀಗಳು, ಮುನವಳ್ಳಿ ಮುರಘರಾಜೇಂದ್ರ ಶ್ರೀಗಳು, ಕುಳ್ಳೂರ ಬಸವಾನಂದ ಭಾರತಿ ಶ್ರೀಗಳು, ಬೆಳವಿ ಮೃತ್ಯುಂಜಯ ಶ್ರೀಗಳು, ತೊಂಡಿಕಟ್ಟಿ ಅಭಿನವ ವೆಂಕಟೇಶ ಮಹಾರಾಜರು, ಹಾರುಗೊಪ್ಪ ಮಾತೋಶ್ರೀ ಶಿವಯೋಗಿನಿದೇವಿ, ಶಿರೋಳ ಅಭಿನವ ಎಚ್ಚರ ಶ್ರೀಗಳು, ಕಡಕೋಳ ಸಿದ್ರಾಯಜ್ಜನವರು ಪಾಲ್ಗೊಳ್ಳುವರು, ಮುಖ್ಯ ಅಥಿತಿಗಳಾಗಿ ಉಪ ಸಭಾಧ್ಯಕ್ಷ ಆನಂದ ಮಾಮನಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನ್ಯಾಯಾಧೀಶರಾದ ಬಾಲಪ್ಪ ಜರಗು, ಸವಿತಾ ಪಟ್ಟಣಶೆಟ್ಟಿ, ವೀರಭದ್ರಗೌಡ ಪಾಟೀಲ, ಬಿ.ಎಸ್.ಕಮತೆ, ತಹಶೀಲ್ದಾರ ಎಮ್.ಎನ್.ಮಠದ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ, ಬಿ.ಬಿ.ಗೋರೋಶಿ, ಬಿ.ಎಚ್.ನಿಂಬರಗಿ, ಮಹೇಶ ಚಿತ್ತರಗಿ, ಮೌನೇಶ್ವರ ಮಾಲಿಪಾಟೀಲ, ಸಿ.ಡಿ.ಗೋಂದಳಿ ಮುಂತಾದವರು ಉಪಸ್ಥಿತರಿರುವರು. ಸಂಜೆ ಸಕಲ ವಾದ್ಯಮೇಳಗಳೊಂದಿಗೆ ದೇವಿ ರಥೋತ್ಸವ ಜರಗುವುದು ಎಂದು ಆಶ್ರಮದ ಪೀಠಾಧಿಪತಿ ಗಣಪತಿ ಮಹಾರಾಜರು ಪ್ರಕಟಣೆಗೆ ತಿಳಿಸಿದರು.