ಇಂಡಿ

ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಿ: ಸೊಡ್ಡಗಿ

ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಿ: ಸೊಡ್ಡಗಿ

ಇಂಡಿ: ಹಸಿರು ಪಡೆ ಯೋಜನೆ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದು ವಿಜಯಪುರ ಡೈಟ್ ಕಾಲೇಜಿನ ಉಪನ್ಯಾಸಕ ಪ್ರಕಾಶ ಸೊಡ್ಡಗಿ ಹೇಳಿದರು.         

ತಾಲೂಕಿನ ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಇಕೋ ಕ್ಲಬ್ ಚಟುವಟಿಕೆಗಳ ಅನುಷ್ಠಾನ ಹಾಗೂ ವಿಶ್ವ ಅರಣ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.  

ಹಸಿರು ಪಡೆ ಯೋಜನೆಯ ಮೂಲಕ ಮಕ್ಕಳಲ್ಲಿ ನೀರು, ಓಷಧಿ ಸಸ್ಯಗಳ, ಪ್ರಾಣಿ ಪಕ್ಷಿಗಳ ಸಂರಕ್ಷಣೆ ಕುರಿತು ಜಾಗೃತಿ  ಮೂಡಿಸಲಾಗುತ್ತಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆಯ್ ಜಿ ಆಳೂರ ಮಾತನಾಡಿ,ಅರಣ್ಯ ನಾಶದಿಂದ ಭೂ ತಾಪಮಾನ ಹೆಚ್ಚಳವಾಗಿ ಜಲಮೂಲಗಳು ಬತ್ತಿ ಹೋಗುವದನ್ನು ತಪ್ಪಿಸಬೇಕಾಗಿದೆ ಎಂದರು.    

 ಉಪನ್ಯಾಸ ನೀಡಿದ ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ, ಪ್ರತಿಯೊಬ್ಬರು ಜಲ ಮೂಲಗಳ ಸಂರಕ್ಷಣೆ ಮತ್ತು ಭೂ ತಾಪಮಾನ ಕಡಿಮೆ ಮಾಡಲು ಮರಗಿಡ ಬೆಳೆಸಿ ಪರಿಸರ ಸಂರಕ್ಷಣೆಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಗದಿಗೆಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ವಿ ಹರಳಯ್ಯ, ಪ್ರಧಾನ ಕಾರ್ಯದರ್ಶಿ ಎಂ ಎಂ ನೇದಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಪಿ ಎಸ್ ಚಾಂದಕವಟೆ,ಹಿರೇರೂಗಿ ಸಿ ಆರ್ ಪಿ ಸಂತೋಷ ಚವ್ಹಾಣ, ಕೆಬಿಎಸ್ ಮುಖ್ಯಶಿಕ್ಷಕಿ ಎಂ ಎಸ್ ಸಾಲೂಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೆಜಿಎಸ್ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿ ವೈ ಪತ್ತಾರ ಸ್ವಾಗತಿಸಿದರು.ಎಸ್ ಡಿ ಬಿರಾದಾರ ನಿರೂಪಿಸಿದರು. ಎಸ್ ಬಿ ಕುಲಕರ್ಣಿ ವಂದಿಸಿದರು. 


ಸುದ್ದಿ ಓದಿ