ಬೈಲಹೊಂಗಲ

ಗುತ್ತಿಗೆದಾರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಗುತ್ತಿಗೆದಾರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಬೈಲಹೊಂಗಲ 17: ತಾಲೂಕಾ ಗುತ್ತಿಗೆದಾರರ ಸಂಘದ ಸದಸ್ಯರಿಗೆ ಆಗುತ್ತಿರುವ ಅನ್ಯಾಯ ಮತ್ತು ತೊಂದರೆಗಳ ಸರಿ ಪಡಿಸುವಂತೆ ಒತ್ತಾಯಿಸಿ, ಸಂಘದ ಅಧ್ಯಕ್ಷ ಶಿವಾನಂದ ಮಡಿವಾಳರ ನೇತ್ರತ್ವದಲ್ಲಿ  ಸದಸ್ಯರುಗಳು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ ಅವರನ್ನು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಈಚೆಗೆ ಭೇಟಿ ಆಗಿ ಮನವಿ ಮಾಡಿದರು.

ಗುತ್ತಿಗೆದಾರ ಸಮಸ್ಯೆಗಳನ್ನು ಆಲಿಸಿದ ಅವರು ತಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡು ಕೊಳ್ಳುವುದಾಗಿ ಭರವಸೆ ನೀಡಿದರು.  ತಾಪಂ ಸಹಾಯಕ ನಿರ್ದೇಶಕ  ವಿಜಯಕುಮಾರ ಪಾಟೀಲ,  ತಾಲೂಕಾ  ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಉದಯ ಬೆಳಗಾವಿ, ನಿಂಗಪ್ಪ ಕುರಿ, ಎಸ್.ವೈ. ದಿವಾನದ, ಮಂಜುನಾಥ ಹುಲಮನಿ ಮತ್ತಿತರರು ಇದ್ದರು.

ಸುದ್ದಿ ಓದಿ