ಅಂಚೆ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ನೀತಿ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಬೈಲಹೊಂಗಲ 29: ಕೇಂದ್ರ ಸರಕಾರ ಅಂಚೆ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ನೀತಿಯನ್ನು ಖಂಡಿಸಿ ಮತ್ತು ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸಿ ಮಾ 28, 29 ರಂದು ಬಂದಗೆ ಕರೆ ನೀಡಿದರ ಪ್ರಯುಕ್ತ ಬೆಂಬಲ ನೀಡಿ ಪಟ್ಟಣದ ಪ್ರಧಾನ ಅಂಚೆ ಕಛೇರಿಯ ನೌಕರರ ವರ್ಗ ಕಚೇರಿ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಜನೇವರಿ 2020 ರಿಂದ 2021 ರವರೆಗೆ ತಡೆ ಹಿಡಿಯಲಾಗಿರುವ ಡಿಎ, ಡಿಆರ್ ಬಾಕಿಯನ್ನು ಶೀಘ್ರದಲ್ಲಿ ಪಾವತಿಸಬೇಕು. ಪೋಸ್ಟಮ್ಯಾನ್, ಜೆಡಿಎಸ್, ಜಿಡಿಎಸ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಬಡ್ತಿಗಾಗಿ ಅತ್ಯುತ್ತಮ ಬೆಂಚ್ ಮಾರ್ಕ ಮಾನದಂಡವನ್ನು ತೆಗೆದು ಹಾಕಬೇಕು, ಅಂಚೆ ಇಲಾಖೆಯ ಖಾಸಗೀಕರಣದ ಧೋರಣೆಯನ್ನು ಕೈಬಿಡಬೇಕು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಪ್ರತಿ ನೌಕರರಿಗೆ ವಿಶೇಷ ರಜೆ ಸೇರಿದಂತೆ ಇತರೇ ಸೌಲಭ್ಯಗಳನ್ನು ಒದಗಿಸಬೇಕು. ಕಮಲೇಶಚಂದ್ರ ವರದಿಯನ್ನು ಗ್ರಾಮೀಣ ಪೋಸ್ಟಮನ್ಗಳಿಗೂ ಅನುಷ್ಠಾನಗೊಳಿಸಬೇಕು.
ಪ್ರಧಾನ ಅಂಚೆ ಕಚೇರಿ ಸೇರಿದಂತೆ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಆಗುತ್ತಿರುವ ನೆಟವರ್ಕ ಸಮಸ್ಯಯನ್ನು ಪರಿಹರಿಸಬೇಕು. ಅವೈಜ್ಞಾನಿಕ ಟಾರ್ಗೆಟ್ ನೀಡಿ ನೌಕರರ ಮೇಲೆ ಮಾನಸಿಕ ಒತ್ತಡ ಹೇರುತ್ತಿರುವದನ್ನು ನಿಲ್ಲಿಸಬೇಕು. 8 ನೇ ವೇತನ ಆಯೋಗವನ್ನು ರಚಿಸುವದು ಸೇರಿದಂತೆ ವಾರಕ್ಕೆ 5 ದಿನ ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು. ಎನ್ಪಿಎಸ್ ಪದ್ದತಿಯನ್ನು ರದ್ದುಗೊಳಿಸಿ ನೌಕರರಿಗೆ ಹಳೇ ಪಿಂಚಣಿ ಪದ್ದತಿಯನ್ನೇ ಮುಂದುವರೆಸಬೇಕು ಎಂಬುದು ಸೇರಿದಂತೆ ಹಲವು ಸೌಲಭ್ಯಗಳಿಗಾಗಿ, ವಿರೋಧಿ ನೀತಿಯನ್ನು ಖಂಡಿಸುವದರೊಂದಿಗೆ ಪ್ರತಿಭಟಿಸಿ ಬಂದ ಕರೆಯನ್ನು ಯಶಸ್ವಿಗೊಳಿಸಿದರು.
ಪ್ರಧಾನ ಅಂಚೆ ಕಛೇರಿಯ ಪೋಸ್ಟ ಮಾಸ್ಟರ್ ಭಾರತಿ ಜೀರೆ, ಇಂದುಮತಿ ಖಂಡ್ರೆ, ಪೂರ್ಣಿಮಾ ನಾಡಗೌಡ್ರ, ಸವಿತಾ ಕಬ್ಬೂರ, ಜಗದೀಶ ತ್ಯಾವಟಗಿ, ಪಂಪಾವತಿ ಬೋವಿ, ಹಣಮಂತ ರಾಜಪ್ಪಗೋಳ, ಎಸ್.ಎಂ,ಯರಗಟ್ಟಿ, ರವಿಕುಮಾರ, ಬಸವರಾಜ ಪುಂಡಿ, ರಮೇಶ ಭೂತಾಳಿ, ಪ್ರಕಾಶ ಬಿಜ್ಜೂರ, ಜಿ.ಎ.ಹುದ್ದಾರ, ಶಿವಕುಮಾರ ಆಚಮಟ್ಟಿ, ಚನ್ನಬಸಪ್ಪ ಪಾಟೀಲ, ಅನಂತ ಯಲಿಗಾರ, ಅಮೃತಾ ಕರ್ಜಗಿಮಠ, ಅನಿತಾ ಸವಣೂರ ಸೇರಿದಂತೆ ಪ್ರಧಾನ ಅಂಚೆ ಕಚೇರಿ ಹಾಗೂ ಗ್ರಾಮೀಣ ಅಂಚೆ ಕಚೇರಿಗಳ ಪೋಸ್ಟಮ್ಯಾನ್ಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ- ಕೇಂದ್ರ ಸರಕಾರದ ವಿರೋಧಿ ನೀತಿಯನ್ನು ಖಂಡಿಸಿ ಬೈಲಹೊಂಗಲದ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ವರ್ಗ ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಗ್ರಾಹಕರಿಗೆ ತೊಂದರೆ ಹಿ ಸಾರ್ವಜನಿಕರಿಗೆ ಅವಶ್ಯ ಸೇವೆಗಳಲ್ಲಿ ಒಂದಾದ ಅಂಚೆ ಇಲಾಖೆಯ ನೌಕರರ ಮುಷ್ಕರದಿಂದ ಸೋಮವಾರ ಗ್ರಾಹಕರು ತೀವೃ ತೊಂದರೆ ಅನುಭವಿಸಬೇಕಾಯಿತು. ಅಂಚೆ ಪತ್ರಗಳು ವಿತರಣೆ, ತುರ್ತು ಪತ್ರಗಳ ರವಾಣೆ ಸೇವೆ, ಸಾಮಾಜಿಕ ಭದ್ರತಾ ಪಿಂಚಣಿ ಬಟವಾಡೆ, ಠೇವಣಿ ಸಂಗ್ರಹ ಸೇವೆ, ಸಣ್ಣ ಉಳಿತಾಯದ ಸೇವೆಗಳು, ಪಿಎಲ್ಐ, ಆಧಾರ ಕಾರ್ಡ ತಿದ್ದುಪಡಿ ಸೇರಿದಂತೆ ಇನ್ನೂಳಿದ ಅವಶ್ಯ ಸೇವೆಗಳು ಸ್ಥಗಿತಗೊಂಡಿದ್ದರಿಂದ ಅಂಚೆ ಇಲಾಖೆಯನ್ನೇ ನಂಬಿದ ಗ್ರಾಹಕರಿಗೆ ಹಲವಾರು ರೀತಿಯ ಸಮಸ್ಯೆ ಎದುರಿಸುವಂತಾಯಿತು.