ಮನೆಗಳ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಧರಣಿ
ಬೈಲಹೊಂಗಲ 23: ಪಟ್ಟಣದ ಹರಳಯ್ಯ ಕಾಲೂನಿಯಲ್ಲಿರುವ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಅಂಬೇಡ್ಕರ ಯುವ ಸೇನೆಯಿಂದ ಬುಧವಾರ ಧರಣಿ ನಡೆಯಿತು.
ರಾಜ್ಯ ಉಪಾಧ್ಯಕ್ಷ ಪರುಶರಾಮ ರಾಯಭಾಗ ಮಾತನಾಡಿ, ಕಳೆದ 40 ವರ್ಷಗಳಿಂದ ವಾಸ ಮಾಡುತ್ತಿರುವ ನಮಗೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿಲ್ಲ, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಕುಳಿತು ಮನವಿ ನೀಡಿದರೂ ಸಹ ಸಂಭಂದಿಸಿದ ಅಧಿಕಾರಿಗಳು ಯಾರೂ ಕೂಡ ಕ್ಯಾರೇ ಎನ್ನುತಿಲ್ಲ. ತಮಗೆ ಬೇಕಾದೆಡೆ ಮನೆಗಳ ಹಕ್ಕು ಪತ್ರ ನೀಡಿದ್ದಾರೆ. ಸುಮಾರು ಐದು ವರ್ಷಗಳಿಂದ ಹೋರಾಟ ಮಾಡುತ್ತಿರುವ ಹರಳಯ್ಯ ಕಾಲೋನಿ ನಿವಾಸಿಗಳ ಕೂಗು ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ. ಕೂಡಲೇ ಮನೆಗಳ ಹಕ್ಕು ಪತ್ರ ಪೂರೈಸಬೇಕು. ಮನೆಗಳ ಹಕ್ಕು ಪತ್ರ ನೀಡದಿದ್ದರೆ ಅನಿಧರ್ಿಷ್ಟಾವಾಧಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಮಂಜು ಚಿಕ್ಕನ್ನವರ, ಮಾರುತಿ ಕೊಂಡೂರ, ಸುನೀಲ ಹಲಗಿ, ರಾಮು ಕಳಮಕರ, ಶಿವಾನಂದ ದಳವಾಯಿ, ರಫೀಕ ಅನ್ಸಾರಿ, ವಿನೋಧ ಸವದತ್ತಿ, ಭರಮಪ್ಪ ತೊರಗಲ್ಲ, ಉಮೇಶ ದೊಡಮನಿ, ರಿಯಾಜ ಅನ್ಸಾರಿ, ಖುರಶಿದಬಾನು ಸೈಯ್ಯದ, ಯಲ್ಲವ್ವ ಭಜಂತ್ರಿ, ಪಾರ್ವತಿ ಮಹಿಮನ್ಕಾರ, ಶಾರದಾ ಕಿತ್ತೂರ, ಕರುನಾ ಆಗಾಸಿ, ಮಾಬೂಬಿ ಸಯ್ಯದ, ಮಮತಾಜ ಫನಿಬಂದ, ಈರಮ್ಮ ದಳವಾಯಿ, ತುಳಸಾಬಾಯಿ ರಾಯಬಾಗ, ಮಕ್ತುಂಬಿ ಮುಜಾವರ ಅನೇಕರು ಇದ್ದರು.