ಬೆಳಗಾವಿ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಒತ್ತಾಯಿಸಿ ಪ್ರತಿಭಟನೆ
ಬೈಲಹೊಂಗಲ 25: ಬೈಲಹೊಂಗಲ - ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಜಿಲ್ಲಾ ಘಟಕದ ಆಶ್ರಯದಲ್ಲಿ ಸೋಮವಾರ ಪಟ್ಟಣದ ಎಸ್.ಆರ್.ಸರ್ಕಲ್ ದಿಂದ ಪ್ರತಿಭಟನೆ ಮೂಲಕ ಉಪವಿಭಾಗಾಧಿಕಾರಿಗಳ ಕಾಯ9ಲಯಕ್ಕೆ ತೆರಳಿ ಎಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ಬೆಳಗಾವಿ ಜಿಲ್ಲೆಯಾದಂತ ರೈತರು ಬಿತ್ತನೆ ಮಾಡುವ ಸಮಯದಲ್ಲಿ ಮುಂಗಾರು ಮಳೆಯನ್ನು ನಂಬಿ ರೈತರು ತಮ್ಮ ಜಮೀನುಗಳನ್ನು ಹದ ಮಾಡಿ, ಬ್ಯಾಂಕಗಳಲ್ಲಿ ಸಾಲ ಪಡೆದು ಬೀಜ ಗೊಬ್ಬರ ತಂದು ಬಿತ್ತನೆ ಮಾಡಿದ್ದು, ಸಕಾಲಕ್ಕೆ ಮಳೆ ಆಗದೇ ಇರುವದರಿಂದ ಸರಿಯಾರಿಗೆ ಬೆಳೆ ಬಂದಿಲ್ಲ. ಇದರಿಂದ ರೈತರು ತುಂಬಾ ಚಿಂತಾಜನಕವಾಗಿದ್ದು ಬ್ಯಾಂಕಿನವರು ಸಾಲ ಮರುಪಾವತಿ ಮಾಡಲು ರೈತರ ಮನೆಗಳಿಗೆ ನೋಟಿಸ ಕಳೆಸುತ್ತಿದ್ದು ಕೂಡಲೆ ಸಕಾ9ರ ಇದನ್ನು ತಡೆಗಟ್ಟಬೇಕು. ಅಲ್ಲದೇ ಪ್ರತಿ ಎಕರೆಗೆ ರೂ. 50 ಸಾವಿರ ಪರಿಹಾರ ನೀಡಬೇಕು, ರೈತರ ಪಂಪಸೆಟ್ ಘಳಿಗೆ ತ್ರಿಪೇಸ ವಿದ್ಯುತ ನಿರಂತರ ಹತ್ತು ಗಂಟೆಗಳ ಕಾಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಲ್ಲಿಕಾರ್ಜುನ ವಾಲಿ, ಶಿವನಸಿಂಗ್ ಮೋಕಾಶಿ, ಶಂಕರ ಮಾಡಲಗಿ, ಸುರೇಶ ಸಂಪಗಾವಿ, ಮಹಾಂತೇಶ ಬಿಜ್ಜೂರ, ಗುರುಸಿದ್ದಪ್ಪ ಕೋಟಗಿ, ವೈ.ಎಸ್.ಪಾಟೀಲ, ಬಿ.ಎಂ.ಚಿಕ್ಕನಗೌಡರ, ಬಸವರಾಜ ಡೊಂಗರಗಾವಿ, ಬಸವರಾಜ ಹಿತ್ತಲಮನಿ, ಮಹಾಂತೇಶ ಕಮತ, ಮಹೇಶ ಕಾದ್ರೋಳ್ಳಿ, ಬಿರ್ಪ ದೇಶನೂರ, ಮಹಾಂತೇಶ ಹಿರೇಮಠ, ಹುಸೇನಸಾಬ ಯಕ್ಕುಂಡಿ, ಶಿವಪುತ್ರ್ಪ ತಟವಟಿ ಸೇರಿದಂತೆ ವಿವಿಧ ರೈತ ಸಂಘಟನೆ ಮುಖಂಡರು ಇದ್ದರು.