ರಾಣೆಬೆನ್ನೂರ

ಕಾಂಗ್ರೆಸ್‌ನಿಂದ ಪ್ರತಿಭಟನೆ: ಚನ್ನಗಿರಿ ಶಾಸಕರ ಬಂಧನಕ್ಕೆ ಆಗ್ರಹ

ಕಾಂಗ್ರೆಸ್‌ನಿಂದ ಪ್ರತಿಭಟನೆ: ಚನ್ನಗಿರಿ ಶಾಸಕರ ಬಂಧನಕ್ಕೆ ಆಗ್ರಹ

ರಾಣೇಬೆನ್ನೂರು 06:  ರಾಜ್ಯದಲ್ಲಿ ಆಡಳಿತ ಹೊಂದಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದಾಗಿ ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು, ರವಿವಾರ ನಗರದಲ್ಲಿ ಭಾರಿ ಪ್ರತಿಭಟ ನಡೆಸಿ, ತಹಸೀಲ್ದಾರ್ ಮೂಲಕ, ಕರ್ನಾಟಕ ಸರ್ಕಾರದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ನಿತ್ಯವೂ ಅನಿಲ್ ದರವನ್ನು ಏರಿಸಿ, ಬಡವರ ಬದುಕಿಗೆ ಕೊಳ್ಳಿಇಡುತ್ತಲಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ ಕೂಡಲ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.       

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡೆದುಕೊಂಡಿವೆ. ಜನಸಾಮಾನ್ಯರ ತೆರಿಗೆ ಹಣವನ್ನು ನಿತ್ಯವೂ ಲೂಟಿ ಮಾಡುತ್ತಲಿದೆ. ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಅಂದು ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರವು, ಬಹು ಅಗತ್ಯವಿರುವ ಅನಿಲ್ ದರವು ಕೇವಲ 300 ಗಳಿಗೆ ವಿತರಿಸುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಸಿಲೆಂಡರ್ ಬೆಲೆ ಗಗನಕೇರಿಸಿದೆ, ಅಲ್ಲದೆ  ಬಡ ಜನರಿಗೆ ಬೇಕಾಗುವ ಅಗತ್ಯ ದಿನಸಿ ವಸ್ತುಗಳನ್ನು ಏರಿಸಿ, ಬಡವರ ಹೊಟ್ಟೆಯ ಮೇಲೆ ಕಲ್ಲು ಹಾಕುತ್ತದೆ ಕೂಡಲೇ ರಾಜ್ಯಪಾಲರು ಮುಂದಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುಸರಿಸುತ್ತಿರುವ ಬೆಲೆ ಏರಿಕೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪ್ರತಿಭಟನಾ ಮುಂಚೂಣಿಯಲ್ಲಿ, ಕಾಂಗ್ರೆಸ್ ಮುಖಂಡರಾದ, ಮಂಜನಗೌಡ ಪಾಟೀಲ್, ಪ್ರಕಾಶ್ ಕೋಳಿವಾಡ, ಸೇರುಖಾನ್ ಕಾಬೂಲಿ, ನೀಲಕಂಠಪ್ಪ ಕುಸುಗೂರು, ಕೃಷ್ಣಪ್ಪ ಕಂಬಳಿ, ನಿಂಗರಾಜ ಕೋಡಿಹಳ್ಳಿ, ಸುನೀತಾ ಬಾರ್ಕಿ, ಜೆಟ್ಟಪ್ಪ ಕರೆಗೌಡ್ರ, ರವೀಂದ್ರ ಗೌಡ ಪಾಟೀಲ್, ಡಾ: ಪ್ರವೀಣ್ ಖನ್ನೂರ್ , ಶೇಕಪ್ಪ ಹೊಸ ಗೌಡ್ರ, ಶಿವಣ್ಣ ಮಣೇಗಾರ್, ಬಸವರಾಜ ತಳವಾರ್, ಹನುಮಂತಪ್ಪ ಬ್ಯಾಲದಹಳ್ಳಿ, ಮಂಜಪ್ಪ ಹಲವಾಗಲ, ರಾಜು ಮಾದಮ್ಮನವರ್, ವಿಶ್ವನಾಥ ಕರೇಗೌಡ್ರ, ಸೇರಿದಂತೆ ನಗರ ಮತ್ತು ಗ್ರಾಮೀಣ ಪಕ್ಷದ ಮುಖಂಡರು ಕಾರ್ಯಕರ್ತರು  ಯುವ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ