ಟಗರು ತಳಿ ಕಾಪಾಡಿ, ರಕ್ಷಣೆ ಮಾಡಿ
ಇಂಡಿ: ತಾಲೂಕಿನ ಟಗರು ತಳಿಗಳನ್ನು ಕಾಪಾಡಬೇಕು. ತಲೆ ತಲಾಂತರದಿಂದ ಒಂದ ಈ ಶ್ರೇಷ್ಠವಾದ ತಳಿಗಳನ್ನು ರಕ್ಷಣೆ ಮಾಡಬೇಕು ಎಂಬುದು ಇಲ್ಲಿಯ ಅನೇಕ ಕುರಿಗಾರರ ಇಚ್ಛೆ. ಈ ಭಾಗದ ತಳಿಗಳು ನಶಿಸಿ ಹೋಗುತ್ತಿರುವ ಮತ್ತು ಕಡಿಮೆ ಪ್ರಮಾಣದಲ್ಲಿ ಕುರಿ, ಆಕಳು ಸೇರಿದಂತೆ ಅನೇಕ ಪ್ರಾಣಿ ಸಂಕುಲನ ಬೆಳೆಸಿ ಆ ತಳಿಗಳನ್ನು ಮುಂದಿನ ಪೀಳಿಗೆಗೆ ತೋರಿಸುವ ಜವಾಬ್ದಾರಿ ಈಗಿನ ಕುರಿಗಾರರು ಆಗಿದೆ ಎಂಬ ಉದ್ದೇಶದಿಂದ ಅನೇಕ ಕುರಿಗಾರರು ತಾಲೂಕಿನಲ್ಲಿ ಪ್ರಯತ್ನಿಸುತ್ತಿದ್ದಾರೆ.
ಅಂತವರಲ್ಲಿ ಇಂಡಿಯ ಬಾನಪ್ಪ ಮಾಸ್ತರ ಪೂಜಾರಿಯವರು ಒಬ್ಬರು. ಶ್ವಾನಗಳಲ್ಲಿ ಮುಧೋಳದ ಹೌಂಡ ಜಾತಿಯ ಶ್ವಾನ ಹೇಗೆ ಪ್ರಸಿದ್ದಿಯೋ ಹಾಗೆಯೇ ಈ ಉಣ್ಣೆಯ ಕಿಲಾರಿ ತಳಿಯ ಟಗರು ಪ್ರಸಿದ್ದಿಯಾಗಿದೆ.
ಮಾಂಸಕ್ಕಾಗಿ ಜವಾರಿ ಮತ್ತು ಬೀಜಕ್ಕಾಗಿ ಕಿಲಾರಿ ಟಗರು ಉಪಯೋಗಿಸುತ್ತಾರೆ. ಇವರು ಸಾಕಿದ್ದ ಏಳು ದಿನದ ಮರಿ ತುಂಬಾ ವಿಶೇಷತೆಯನ್ನು ಹೊಂದಿದೆ. ಮರಿ ಟಗರು ಹುಟ್ಟಿ ಏಳು ದಿನ ಕಳೆಯುವದರೊಳಗೆ ಮಹಾರಾಷ್ಟ್ರದ ಕುರಿಗಾರರಿಂದ ಬಹು ಬೇಡಿಕೆ ಬಂದಿದ್ದು ಇದನ್ನು ಮಹಾರಾಷ್ಟ್ರದ ಜತ್ತ ತಾಲೂಕಿನ ಸಿದ್ದನಾಥ ಗ್ರಾಮದ ನಾಮದೇವ ಖೋಖರೆ ಎಂಬುವರು ಕುರಿ ಸಾಗಾಣಿಕೆದಾರರು ಎರಡು ಲಕ್ಷಕ್ಕೆ ಖರೀದಿ ಮಾಡಿದ್ದಾರೆ.
ಗುರುವಾರ ಪಟ್ಟಣದಲ್ಲಿ ಸುಲ್ತಾನ ಎಂಬ ಟಗರು ಮರಿಯನ್ನ ಹೊತ್ತುಕೊಂಡು ಡೋಲು ಬ್ಯಾಂಡ್ ಬಾಜಾ ಬಾರಿಸುತ್ತಾ ಮೆರವಣೆಗೆ ಮೂಲಕ ಪ್ರದರ್ಶನ ಮಾಡಿದರು.
ಬಾನಪ್ಪ ಪೂಜಾರಿ ಮಾತನಾಡಿ ಈ ಟಗರು ಸಂತತಿ ಅಪರೂಪವಾಗಿದ್ದು ಇದು ಪರಿಶುದ್ಧವಾಗಿ ದೇಶಿ ಖಿಲಾರಿ ತಳಿಯಾಗಿದ್ದು ಸಂಪೂರ್ಣವಾಗಿ ಮುಖದಲ್ಲಿ ಕುಡಿಗಿಲಾಕಾರ ಇದರ ಮೈ ಬಣ್ಣ, ಗಿಳಿ ಮೂಗು, ತಳಿ ಪರೀಶೀಲನೆ ಮಾಡಿ ತೆಗೆದುಕೊಳ್ಳುವರು. ಅಮೂಲ್ಯವಾದ ಪಶು ಪಕ್ಷಿ ಪ್ರಾಣಿಗಳ ಕುರಿತು ಜಾಗೃತಿ ಮೂಡಿಸಲು ಇವುಗಳ ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಅದಲ್ಲದೆ ಈ ಟಗರಿನ ತಂದೆಗೆ ಮೂವತ್ತು ಲಕ್ಷ ರೂ ಗೆ ಬೇಡಿದ್ದಾರೆ ಎಂದು ಬಾನಪ್ಪಪೂಜಾರಿ ತಿಳಿಸಿದರು.