ಪಕ್ಷದ ಟಿಕೆಟ್ ನೀಡುವ ಭರವಸೆ: ಅವಕಾಶವಂಚಿತ ನಾನು ಪಕ್ಷೇತರ ಸ್ಪರ್ಧೆ: ಸಂತೋಷಕುಮಾರ
ರಾಣೇಬೆನ್ನೂರು 17: ಕ್ಷೇತ್ರದಜನತೆ, ನನ್ನ ಮೇಲೆ ಅನಂತ ಪ್ರೀತಿ, ಅಭಿಮಾನವಿಟ್ಟಿದ್ದಾರೆ, ಅದನ್ನು ವ್ಯರ್ಥ ಮಾಡುವುದಿಲ್ಲ, ಅಧಿಕಾರಕ್ಕೆ ಬಂದೇ ಬರುವೆ ಎಂದು ಪಕ್ಷೇತರ ಪರಾಜಿತ ಅಭ್ಯರ್ಥಿ ಸಂತೋಷಕುಮಾರ ಪಾಟೀಲ ಶಪಥ ಮಾಡಿದರು. ಅವರು ಬಿರಲಿಂಗೇಶ್ವರ ನಗರದಲ್ಲಿರುವ ತಮ್ಮ ಕಛೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಕೃತಜ್ಞತಾ ಸಭೆಯಲ್ಲಿ ನೂರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳು ಬಿಫಾರ್ಮ್ ನೀಡುತ್ತೇವೆ ಎಂದು ಭರವಸೆ ನೀಡಿ, ಕೊನೆ ಕ್ಷಣದಲ್ಲಿ ಕೈಚಲ್ಲಿದ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸಲು ಕಡಿಮೆ ಅವಧಿ ದೊರೆಯಿತು. ನಮಗೆ ಕ್ಷೇತ್ರದ ಮತದಾರರ ಆಶೀರ್ವಾದವಿದೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವೆ ಎಂದ ಅವರು ಕ್ಷೇತ್ರದ ಜನರಿಗೆ ತಮ್ಮ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಬಾರಿ ಸ್ಪರ್ಧಾತ್ಮಕವಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನನ್ನಿಂದ ಏನು ನೀರೀಕ್ಷೆ ಮಾಡಿದ್ದರು ಅದಕ್ಕೂ ಮೀರಿ ಅವರಿಗೆ ಕ್ಷೇತ್ರದ ಜನರು ಉತ್ತರ ನೀಡಿದ್ದಾರೆ ಇದರಲ್ಲಿ ಅತಿ ದೊಡ್ಡ ಪಕ್ಷವಾದ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ನನ್ನಿಂದ ಹೊಡೆತ ಆಗಿದೆ ಎಂದು ಕ್ಷೇತ್ರದ ಜನರು ಹೇಳಿಕೊಳ್ಳುತ್ತಿದ್ದಾರೆ ಹಾಗಾಗಿ ಈ ಬಾರಿ ನನಗೆ ಕಡಿಮೆ ಮತಗಳು ಮತದಾರರು ನೀಡಿರಬಹುದು ಮುಂದಿನ ದಿನಗಳಲ್ಲಿ ಪಕ್ಷ ಟಿಕೆಟ್ ನೀಡಿದ್ದೆ ಆದರೆ ಗೆಲುವು ಖಂಡಿತ ನಮ್ಮದೇ, ಅದರ ಪರವಾಗಿ ದುಡಿಯುತ್ತೇವೆ ಮತ್ತೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮುಂದುವರಿಯುತ್ತೇವೆ. ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಸೈಡ್ ಲೆನ್ಸ್ ಮಾಡಿರುವ ಬಗ್ಗೆ ಈಗಾಗಲೇ ಕ್ಷೇತ್ರದಲ್ಲಿ ಅನುಭವಿಸಿದ್ದಾರೆ ಮುಂದಿನ ದಿನಗಳಲ್ಲಿ ಈ ರೀತಿ ತಪ್ಪು ಮಾಡದೆ ಹೈಕಮಾಂಡ್ ಗೆಲುವಿನ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ನೀಡಿದ್ದೆ ಆದಲ್ಲಿ ಪಕ್ಷಕ್ಕೆ ನಾವು ದುಡಿಯುತ್ತೇವೆ ಕ್ಷೇತ್ರದ ಪ್ರತಿಯೊಬ್ಬರಿಗೂ ನಿಮ್ಮ ಋಣ ತೀರಿಸಲು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಪ್ರತಿಯೊಂದು ಮನೆ ಮನೆಗೆ ತೆರಳಿ ಕಾರ್ಯಕ್ರಮವನ್ನು ಕೈಗೊಳ್ಳುತ್ತೇವೆ. ಕ್ಷೇತ್ರದಲ್ಲಿ ಜನರಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ ಎಂದರು ಈ ಸಂದರ್ಭದಲ್ಲಿ ವಕೀಲರಾದ ಪಿ.ಆರ್. ಕುಪ್ಪೆಲೂರ, ಬಸವರಾಜ ರೊಡ್ಡನವರ, ಹನುಮಂತರಾಜ, ತಿಮ್ಮನಗೌಡ ಪಾಟೀಲ, ಯುವರಾಜ ಬಾರಾಟಕ್ಕೆ, ಗಂಗಾಧರ ಬೂದನೂರ, ನಾಗರಾಜ ಹೊನ್ನತ್ತಿ, ಶರಣ ಅಂಗಡಿ, ಸಿದ್ದನಗೌಡ ಬೆಲ್ಲದ, ಬಸನಗೌಡ ಪಾಟೀಲ, ಕಿರಣ ಬುಳ್ಳನ ಗೌಡ್ರ, ಪ್ರಶಾಂತ ಹಿರೇಬಿದರಿ ಮತ್ತಿತರ ಗಣ್ಯರು ಹಾಗೂ ಕಾರ್ಯಕರ್ತರು ನವಯುಗದ ಅಭಿಮಾನಿಗಳು ಉಪಸ್ಥಿತರಿದ್ದರು