ಇಂಡಿ

ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಪ್ರಗತಿ ಪರೀಶೀಲನಾ ಸಭೆ

ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಪ್ರಗತಿ ಪರೀಶೀಲನಾ ಸಭೆ

ಇಂಡಿ05: ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಪ್ರಗತಿ ಪರೀಶೀಲನಾ ಸಭೆ ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ 318 ರಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ  

ಶಾಸಕ ಯಶವಂತರಾಯಗೌಡ ಪಾಟೀಲ ಅವರು  ಇಂಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳ ಬಗ್ಗೆ, ಹೋರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಅನುಷ್ಠಾನಗೊಳಿಸುವ ಬಗ್ಗೆ, ಗುತ್ತಿ ಬಸವಣ್ಣ ನೀರಾವರಿ ಯೋಜನೆಯಲ್ಲಿ ಕೇವಲ ಎರಡು ಪಂಪುಗಳು ಚಾಲನೆಯಯಲ್ಲಿರುವದರಿಂದ ನಾಲೆಯ ಕೊನೆಯ ಭಾಗದ ವರೆಗೆ ನೀರು ಹರಿಯುತ್ತಿಲ್ಲ. ಆದ ಕಾರಣ ಎಲ್ಲ 8 ಪಂಪುಗಳು ಏಕ ಕಾಲದಲ್ಲಿ ಕಾರ್ಯನಿರ್ವಹಿಸುವಂತೆ ಇಂಡಿ ಶಾಖಾ ಕಾಲುವೆಯ ಕಿ.ಮಿ 64 ರಿಂದ 172 ರ ವರೆಗೆ  ನವೀಕರಣ ಮಾಡುವ ಬಗ್ಗೆ  ಮತ್ತು ಇಂಡಿ ತಾಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು ಕೆರೆ ತುಂಬುವ ಯೋಜನೆಗೆ  ಈಆರ್‌ಸಿ ಸಮಿತಿಯಲ್ಲಿ ಅನುಮೋದಿಸಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವ ಬಗ್ಗೆ ಸೇರಿದಂತೆ ನೀರಾವರಿ ಇಲಾಖೆಯ ಜಲ್ವಂತ ಸಮಸ್ಯೆಗಳ  ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. 

ಸಭೆಯಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಕೆ.ಬಿ.ಜೆ.ಎನ್‌.ಎಲ್ ಎಮ್‌.ಡಿ ಶಿವಕುಮಾರ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಅನೀಲಕುಮಾರ, ಇಲಾಖಾ ಮುಖ್ಯ ಅಭಿಯಂತರ, ಕಾರ್ಯಪಾಲಕ ಅಭಿಯಂತರ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. 

ಫೋಟೋ ಕ್ಯಾಪ್ಸನ್ 05 ಇಂಡಿ 01: ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ನೀರಾವರಿ ಕುರಿತು ಚರ್ಚೆಯ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಪಾಲ್ಗೊಂಡಿದ್ದರು. 


ಸುದ್ದಿ ಓದಿ