ಮಲಪ್ರಭಾ ನದಿ ನೀರಿನ ಮಟ್ಟ ಪರೀಶೀಲಿಸಿದ ಪ್ರಭಾವತಿ ಫಕೀರಪೂರ
ಲೋಕದರ್ಶನ ವರದಿ
ಬೈಲಹೊಂಗಲ 14: ತಾಲೂಕಿನ ನಯಾನಗರ ಗ್ರಾಮದ ಹತ್ತಿರವಿರುವ ಮಲಪ್ರಭಾ ನದಿಗೆ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಭೇಟಿ ನೀಡಿ ನೀರಿನ ಮಟ್ಟ ಪರೀಶೀಲಿಸಿದರು
ಬೈಲಹೊಂಗಲ: ಈ ಭಾಗದ ಜನತೆಯ, ರೈತರ ಜೀವನಾಡಿಯಾಗಿರುವ ಮಲಪ್ರಭಾ ನದಿಯಲ್ಲಿರುವ ನೀರಿನ ಮಟ್ಟ ಬಿರು ಬಿಸಿಲಿಗೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ನದಿ ಮದ್ಯದಲ್ಲಿ ನಿರ್ಮಿಸಿದ ಬ್ಯಾರೇಜ್ ಗೇಟುಗಳನ್ನು ತಕ್ಷಣ ಮುಚ್ಚಿ, ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಿಸಲಾಗುವದು ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಹೇಳಿದರು.
ಅವರು ತಾಲೂಕಿನ ನಯಾನಗರ ಗ್ರಾಮದ ಹತ್ತಿರವಿರುವ ಮಲಪ್ರಭಾ ನದಿಗೆ ಮಂಗಳವಾರ ಭೇಟಿ ನೀಡಿ ನೀರಿನ ಮಟ್ಟ ವೀಕ್ಷಿಸಿ, ನಂತರ ಮಾತನಾಡಿ, ಮುಂಗಾರು ಹಂಗಾಮಿಗೆ ನೀರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ, ಹೀಗಾಗಿ ನದಿಯಲ್ಲಿ ನೀರು ಕಡಿಮೆಯಾಗಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೀಗಾ ವಹಿಸಬೇಕಾಗಿದೆ, ಜನತೆ ಕೂಡ ನೀರನ್ನು ವ್ಯರ್ಥ ಮಾಡದೇ ಮಿತವಯವಾಗಿ ಬಳಸಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ ಮಾತನಾಡಿ, ನದಿಯಲ್ಲಿರುವ ಬ್ಯಾರೇಜ್ ಗೇಟುಗಳ ಸಣ್ಣಪುಟ್ಟ ದುರಸ್ಥಿ ಕಾರ್ಯ ನಡೆದಿದ್ದು ಕೂಡಲೇ ಬ್ಯಾರೇಜ ಎಲ್ಲ ಗೇಟುಗಳನ್ನು ಮುಚ್ಚಿ ನದಿಯಲ್ಲಿ ನೀರು ಸಂಗ್ರಹಿಸಲಾಗುವುದು. ಪುರಸಭೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರಿನ ಯಾಗದಂತೆ ನಿಗಾ ವಹಿಸಲಾಗುವುದು ಎಂದರು.
ಆನಿಗೋಳ ಗ್ರಾಮದ ಮಾದರ ಸಮಾಜದ ಸ್ಮಶಾನಕ್ಕೆ ರಸ್ತೆ ಕಲ್ಪಿಸಿ: ತಾಲೂಕಿನ ಆನಿಗೋಳ ಗ್ರಾಮದ ಮಾದರ ಸಮಾಜಕ್ಕೆ ಸ್ಮಶಾನಕ್ಕೆ ತೆರಳಲು ರಸ್ತೆ ಸಮಸ್ಯೆ ಇದ್ದು, ಶವ ಸಂಸ್ಕಾರಕ್ಕೆ ತುಂಬಾ ತೊಂದರೆ ಯಾಗುತ್ತಿರುವ ಕುರಿತು ಹಲವಾರು ದೂರುಗಳು ಬಂದಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಸಹಕರಿಸಬೇಕೆಂದು ಎಸಿ ಅವರು ರೈತರಿಗೆ ತಿಳುವಳಿಕೆ ನೀಡಿದರು. ಆದರೆ ರೈತರು ಕಾಲುದಾರಿಯಿಂದ ತೆರಳಲು ನಮ್ಮ ಅಭ್ಯಂತರವಿಲ್ಲ, ಅಧಿಕೃತವಾಗಿ ರಸ್ತೆ ನಿಮಾ ರ್ಣ ಮಾಡುವುದು ಬೇಡ ಎಂದು ರೈತರು ತಿಳಿಸಿದರು. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಜೊತೆಗೆ ಮತ್ತೋಮ್ಮೆ ಸಭೆ ನಡೆಸಲಾಗುವುದು ಎಂದರು. .
ತಹಶೀಲ್ದಾರ ಸಂಗಮನಾಥ ಮೆಳ್ಳಿಕೇರಿ, ಸಮಾಜ ಕಲ್ಯಾಣ ಅಧಿಕಾರಿ ಸಿ.ಬಿ.ಯಮನೂರ, ಕಂದಾಯ ನೀರೀಕ್ಷಕ ಸುರೇಶ ಮಾಳಗಿ, ಪಿಡಿಒ ಕಾವೇರಿ ಬಡಿಗೇರ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.