ಇಂಡಿ

ಬಡತನ-ಅಸಮಾನತೆ ಹೋಗಲಾಡಿಸಬೇಕಿದೆ: ಸಂತೋಷ ಬಂಡೆ

ಬಡತನ-ಅಸಮಾನತೆ ಹೋಗಲಾಡಿಸಬೇಕಿದೆ: ಸಂತೋಷ ಬಂಡೆ


ಇಂಡಿ: ಕೋವಿಡ್ ಬಿಕ್ಕಟ್ಟಿನಿಂದಾಗಿ ಬಡತನ, ಅಸಮಾನತೆಗಳು ಹೆಚ್ಚಾಗಿದ್ದು, ಇದರಿಂದ ಮಾನವ ಹಕ್ಕುಗಳಲ್ಲಿ ಅಂತರ ಉಂಟಾಗಿದೆ. ಕೋವಿಡ್ ಬಳಿಕದ ಜಗತ್ತಿನಲ್ಲಿ ಮಾನವ ಹಕ್ಕನ್ನು ಪ್ರಮುಖ ವಿಷಯವಾಗಿ ಪರಿಗಣಿಸಿ, ಅದರ ಮೂಲಕ ಅಸಮಾನತೆಗಳನ್ನು ಹೋಗಲಾಡಿಸಿದರೆ ಮಾತ್ರ, ಸುಸ್ಥಿರ, ನ್ಯಾಯ ಸಮ್ಮತ ಜಗತ್ತನ್ನು ಪುನರ್ನಿರ್ಮಿಸಬಹುದು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.        

 ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.        

 ತಾರತಮ್ಯ ಮತ್ತು ವರ್ಣಭೇದ ನೀತಿಯು ಕೋವಿಡ್ ಬಿಕ್ಕಟ್ಟಿನಿಂದಾಗಿ ಹೆಚ್ಚಾಗಿದೆ. ಕೋವಿಡ್ ಬಳಿಕದ ಜಗತ್ತಿನಲ್ಲಿ ತಾರತಮ್ಯ ಕೊನೆಗೊಳಿಸಿ ಸಮಾನತೆ ಉತ್ತೇಜಿಸುವುದು ಪ್ರಮುಖ ಅವಶ್ಯಕತೆಯಾಗಿದೆ ಎಂದು ಹೇಳಿದರು.    

        ಟಿಜಿಟಿ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,ನಾವು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಉತ್ತೇಜಿಸಬೇಕು ಮತ್ತು ರಕ್ಷಿಸಬೇಕು. ಹೊಸ ಜಗತ್ತಿಗೆ ಹೊಸತರದ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.      

   ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ, ಮನುಷ್ಯನಿಗೆ ಕನಿಷ್ಠ ಅಗತ್ಯತೆಗಳು ಸಿಗಬೇಕು, ಅವರ ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ಧೇಶದಿಂದ ಪ್ರತಿವರ್ಷ ಡಿ. 10 ಅನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ ಎಂದರು.       

 ಎಸ್ ಎಚ್ ಮೈದರಗಿ,ಎನ್ ಬಿ ಚೌಧರಿ,ಎಸ್ ಬಿ ಹೆಬ್ಬಾಳ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ